ಒಂದೇ ದಿನ ದೇಶದ ವಿವಿಧೆಡೆಗಳಲ್ಲಿ ಒಂಬತ್ತು ಶಾಖೆಗಳನ್ನು ತೆರೆದ ಕರ್ಣಾಟಕ ಬ್ಯಾಂಕ್
ಮಂಗಳೂರು, ಫೆ.9: ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್ ಕ್ಷಿಪ್ರಗತಿಯಲ್ಲಿ ತನ್ನ ಶಾಖೆಗಳನ್ನು ವೃದ್ಧಿಸುತ್ತಾ ಸಾಗಿದೆ. ಗುರುವಾರ ದೇಶದ ವಿವಿಧೆಡೆಗಳಲ್ಲಿ ಒಂಬತ್ತು ಶಾಖೆಗಳನ್ನು ಉದ್ಘಾಟಿಸುವ ಮೂಲಕ ಕರ್ಣಾಟಕ ಬ್ಯಾಂಕ್ ತನ್ನ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸಲು ಮುಂದಾಗಿದೆ.
ರಾಜಸ್ಥಾನದ ಜೈಪುರ, ಮಾಲ್ವಿಯಾ ನಗರದಲ್ಲಿ ಕರ್ಣಾಟಕ ಬ್ಯಾಂಕ್‌ನ 785ನೇ ಶಾಖೆಯನ್ನು ಉದ್ಘಾಟಿಸಲಾಯಿತು. ರಾಜಸ್ಥಾನ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಯ ಯೋಜನಾ ನಿರ್ದೇಶಕರಾದ ಡಾ. ಪ್ರೀತಮ್ ಬಿ. ಯಶವಂತ್ ಮತ್ತು ಬ್ಯಾಂಕ್ ಗ್ರಾಹಕರಾದ ದಾಮೋದರ್ ಪ್ರಸಾದ್ ಹಲ್ದಿಯಾ ಉದ್ಘಾಟನೆ ನೆರವೇರಿಸಿದರು. ಈ ವೇಳೆ ಮುಖ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಟ್ ಎಂ., ದಿಲ್ಲಿ ಪ್ರಾದೇಶಿಕ ಕಚೇರಿಯ ಡಿಜಿಎಂ ರವಿಚಂದ್ರನ್ ಎಸ್, ಶಾಖಾ ವ್ಯವಸ್ಥಾಪಕರಾದ ಗೌತಮ್ ಜೈನ್ ಹಾಗೂ ಇತರರು ಉಪಸ್ಥಿತರಿದ್ದರು.
ತಿರುಪುರದ ಪಲ್ಲದಮ್ ಎಂಬಲ್ಲಿ ಬ್ಯಾಂಕ್‌ನ 786ನೇ ಶಾಖೆಯನ್ನು ಪಲ್ಲದಮ್ ಹೈಟೆಕ್ ವೀವಿಂಗ್ ಪಾರ್ಕ್‌ನ ಮುಖ್ಯ ವ್ಯವಸ್ಥಾಪನಾ ನಿರ್ದೇಶಕರಾದ ಎಂ. ಸೆಂಥಿಲ್ ಕುಮಾರ್ ಉದ್ಘಾಟಿಸಿದರು. ಅರುಣೋದಯ ಮಿಲ್ಸ್‌ನ ವ್ಯವಸ್ಥಾಪನಾ ನಿರ್ದೇಶಕರಾದ ಆರ್.ಎ ಮುತ್ತುಕುಮಾರಸ್ವಾಮಿ, ಪ್ರಧಾನ ವ್ಯವಸ್ಥಾಪಕ ರಾದ ಚಂದ್ರಶೇಖರ್ ರಾವ್ ಬಿ., ಎಜಿಎಂ ಪ್ರಸಂದನ್ ತೆನಿಸೆರಿ, ಚೆನ್ನೈ ಪ್ರಾದೇಶಿಕ ಕಚೇರಿಯ ಮುಖ್ಯ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್ ಎಂ., ಶಾಖಾ ಪ್ರಬಂಧಕರಾದ ಬೆಂಜಮಿನ್ ದಯಾಲರಾಜನ್ ಹಾಗೂ ಇತರರು ಉಪಸ್ಥಿತರಿದ್ದರು.
ಬ್ಯಾಂಕ್‌ನ 787ನೇ ಶಾಖೆಯನ್ನು ಅಲ್ವಲ್‌ಮ ಸಿಕಂದರಾಬಾದ್‌ನಲ್ಲಿ ರಾಷ್ಟ್ರೀಯ ಭೂಭೌತಿಕ ಸಂಶೋಧನಾ ಸಂಸ್ಥೆಯ ಗ್ರಹ ಭೂವಿಜ್ಞಾನ ವಿಭಾಗದ ಪ್ರಧಾನ ವಿಜ್ಞಾನಿಯಾದ ಡಾ. ಪಿ ಸೆಂಥಿಲ್ ಕುಮಾರ್ ಉದ್ಘಾಟಿಸಿದರು. ಬ್ಯಾಂಕ್‌ನ ಮಾಜಿ ನಿರ್ದೇಶಕರಾದ ಸೀತಾರಾಮ ಮೂರ್ತಿ, ಪ್ರಧಾನ ವ್ಯವಸ್ಥಾಪಕ ಸುಭಾಷ್ಚಂದ್ರ ಪುರಾಣಿಕ್, ಎಜಿಎಂ ಅನಿಲ್ ಇ. ಮೋರಸ್, ಕ್ಷೇತ್ರೀಯ ಎಜಿಎಂ ನಾಗರಾಜ ಉಪಾಧ್ಯಾಯ ಬಿ, ಹೈದರಾಬಾದ್ ಪ್ರಾದೇಶಿಕ ಕಚೇರಿಯ ಮುಖ್ಯ ಪ್ರಬಂಧಕರಾದ ರಾಮಮೋಹನ್ ಎ., ಮತ್ತು ರಮೇಶ್ ಟಿ.ಎನ್, ಶಾಖಾ ಪ್ರಬಂಧಕ ರಮಣ ರೆಡ್ಡಿ ಎಸ್., ಹಾಗೂ ಇತರರು ಉಪಸ್ಥಿತರಿದ್ದರು.
ಹಾಸನದ ವಿಜಯನಗರದಲ್ಲಿ ಬ್ಯಾಂಕ್‌ನ 788ನೇ ಶಾಖೆಯನ್ನು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ವಾಡ್ ಐಪಿಎಸ್ ಹಾಗೂ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರು ಮತ್ತು ಭಾರತಿ ಕಾಫಿ ಕ್ಯೂರಿಂಗ್ ವರ್ಕ್ಸ್, ಹಾಸನ ಇದರ ಜಂಟಿ ಮಾಲಕರಾದ ಜಿ.ಎಲ್ ಮುದ್ದೇ ಗೌಡ ಉದ್ಘಾಟಿಸಿದರು.
ಪ್ರಧಾನ ವ್ಯವಸ್ಥಾಪಕ ಬಾಲಚಂದ್ರ, ಎಜಿಎಂ ಜಗದೀಶ್ ಕೆ.ಎಸ್., ಮೈಸೂರು ಪ್ರಾದೇಶಿಕ ಕಚೇರಿಯ ಮುಖ್ಯ ಪ್ರಬಂಧಕರು ತಮ್ಮಯ್ಯಾ ಎ.ಎ., ಶಾಖಾ ಪ್ರಬಂಧಕರು ಪ್ರಮೋದ್ ಯು.ಬಿ ಈ ವೇಳೆ ಉಪಸ್ಥಿತರಿದ್ದರು.
ಬ್ಯಾಂಕ್‌ನ 789ನೇ ಶಾಖೆಯನ್ನು ತಿರುವನಂತರಪುರಂನ ರಾಜಧಾನಿ ಗ್ರೂಪ್‌ನ ಮುಖ್ಯಸ್ಥ ಮತ್ತು ವ್ಯವಸ್ಥಾಪನಾ ನಿರ್ದೇಶಕರಾದ ಡಾ. ಬಿಜು ರಮೇಶ್ ಉದ್ಘಾಟಿಸಿದರು. ಜನರಲ್ ಮ್ಯಾನೇಜರ್ ಕೃಷ್ಣ ರಾವ್, ಮಂಗಳೂರು ಪ್ರಾದೇಶಿಕ ಕಚೇರಿಯ ಎಜಿಎಂ ರಮೇಶ್ ಭಟ್, ಶಾಖಾ ಪ್ರಬಂಧಕ ಶ್ರೀಜಿತ್ ಕೆ.ಎಸ್ ಹಾಗೂ ಇತರರು ಉಪಸ್ಥಿತರಿದ್ದರು.
ಕೊಲ್ಕತ್ತಾದ ಬರಸತ್‌ನಲ್ಲಿ ಕರ್ಣಾಟಕ ಬ್ಯಾಂಕ್‌ನ 790ನೇ ಶಾಖೆಯನ್ನು ಬರಸತ್‌ನ ರತತಲಾದ ಅವರ್ ಲೇಡಿ ಆಫ್ ಲೂರ್ಡ್ಸ್‌ನ ಪಾದ್ರಿಗಳಾದ ಫಾ. ಕ್ಸೇವಿಯರ್ ಕುಜುರ್ ಉದ್ಘಾಟಿಸಿದರು.
ಈ ವೇಳೆ, ಪ್ರಧಾನ ವ್ಯವಸ್ಥಾಪಕ ನಾಗರಾಜ್ ರಾವ್ ಬಿ., ಎಜಿಎಂ ಹೆರ್ಲೆ ವಸಂತ್ ಆರ್., ಕೊಲ್ಕತ್ತಾ ಕಚೇರಿಯ ಮುಖ್ಯ ಪ್ರಬಂಧಕರಾದ ಸತ್ಯ ನಾರಾಯಣನ್ ಪಿ.ವಿ., ಬೋಧಿಸುಖಾ ಶಾಲೆಯ ಮುಖ್ಯಸ್ಥರಾದ ವೆನ್ ಡಾ. ನಂದೊ ಬಾತಾ, ಜಾಗದ ಮಾಲಕರಾದ ಸಂಗೀತ ಪೌಲ್ ಮತ್ತು ರಜಿಬ್ ಪೌಲ್, ಕೊಲ್ಕತ್ತಾ ಸಾಗರೋತ್ತರ ಶಾಖೆಯ ಮುಖ್ಯ ಪ್ರಬಂಧಕರಾದ ವಿನಯ್, ಶಾಖಾ ಪ್ರಬಂಧಕರಾದ ಸುಶಾಂತ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.
ಹುನಗುಂದದಲ್ಲಿ ಬ್ಯಾಂಕ್‌ನ 791ನೇ ಶಾಖೆಯನ್ನು ಇಳಕಲ್‌ನ ಚಿತ್ತರಗಿ ಶ್ರೀ ವಿಜತ ಮಹಂತೇಶ ಸಂಸ್ಥಾನ ಮಠದ ಸ್ವಾಮೀಜಿಗಳಾದ ಡಾ. ಮಹಂತಾ ಸ್ವಾಮೀಜಿಯವರು ಉದ್ಘಾಟಿಸಿದರು. ಇಳಕಲ್‌ನ ಚಿತ್ತರಗಿ ಶ್ರೀ ವಿಜತ ಮಹಂತೇಶ ಸಂಸ್ಥಾನ ಮಠದ ಶ್ರೀ ಗುರು ಮಹಂತಾ, ಪ್ರಧಾನ ವ್ಯವಸ್ಥಾಪಕರಾದ ಗೋಕುಲ್‌ದಾಸ್ ಪೈ, ಎಜಿಎಂ ನಾಗೇಂದ್ರ ರಾವ್ ಟಿ., ಹುಬ್ಬಳ್ಳಿ ಕಚೇರಿಯ ಮುಖ್ಯ ಪ್ರಬಂಧಕರಾದ ಮಂಜುನಾಥ ಸೋಮಯಾಜಿ, ಶಾಖಾ ಪ್ರಬಂಧ ಕರಾದ ಸಿ.ಎಸ್ ದೇಶಪಾಂಡೆ ಹಾಗೂ ಇತರರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡದ ಕೆಯ್ಯೂರಿನಲ್ಲಿ ಕರ್ಣಾಟಕ ಬ್ಯಾಂಕ್‌ನ 792ನೇ ಶಾಖೆಯನ್ನು ಕೆಯ್ಯೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಬಾಬು ಬಿ ಅವರು ಉದ್ಘಾಟಿಸಿದರು. ಈ ವೇಳೆ ಪ್ರಧಾನ ವ್ಯವಸ್ಥಾಪಕರಾದ ಮಂಜುನಾಥ್ ಭಟ್ ಬಿ.ಕೆ., ಮಂಗಳೂರು ಕಚೇರಿಯ ಮುಖ್ಯ ಪ್ರಬಂಧಕರಾದ ಶ್ರೀಮತಿ ಶೋಭಾ ರಾವ್ ಮತ್ತು ದಿನೇಶ್ ಕೆ.ವಿ., ಶಾಖಾ ಪ್ರಬಂಧಕರಾದ ರಾಜೇಶ್ ಕೆ ಹಾಗೂ ಇತರರು ಉಪಸ್ಥಿತರಿದ್ದರು.
ಹರ್ಯಾಣದ ಝಿರಕ್‌ಪುರದಲ್ಲಿ ಬ್ಯಾಂಕ್‌ನ 793ನೇ ಶಾಖೆಯನ್ನು ಹರ್ಯಾಣ ಸರಕಾರದ ವಸತಿ ಇಲಾಖೆಯ ಮುಖ್ಯ ಕಾರ್ಯದ್ಯಾಗಿರುವ ಶ್ರೀಕಾಂತ್ ವಲ್ಗದ್ ಐಎಎಸ್ ಉದ್ಘಾಟಿಸಿದರು. ಪ್ರಧಾನ ವ್ಯವಸ್ಥಾಪಕರಾದ ಮಹಾಲಿಂಗೇಶ್ವರ ಕೆ., ದಿಲ್ಲಿ ಕಚೇರಿಯ ಎಜಿಎಂ ಹಯವದನ ಉಪಾಧ್ಯಾಯ, ಶಾಖಾ ಪ್ರಬಂಧಕರಾದ ವರುಣ್ ಸೂರಿ ಹಾಗೂ ಇತರರು ಉಪಸ್ಥಿತರಿದ್ದರು.