ಅಡ್ಡೂರು ಕ್ಲಷ್ಟ್ಟರ್ ಎಸ್ಕೆಎಸೆಸ್ಸೆಫ್‌ಗೆ ಆಯ್ಕೆ
ಮಂಗಳೂರು, ಫೆ.10: ಎಸ್ಕೆಎಸ್ಸೆಸ್ಸೆಫ್ ಅಡ್ಡೂರು ಕ್ಲಷ್ಟರ್‌ನ ಮಹಾಸಭೆಯು ಕೈಕಂಬ ವಲಯ ಉಪಾಧ್ಯಕ್ಷ ಶರೀಫ್ ಮಳಲಿಯ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಲೆಕ್ಕಪತ್ರ ಮಂಡಿಸಿದರು. ಕೈಕಂಬ ವಲಯ ಅಧ್ಯಕ್ಷ ಮುಹಮ್ಮದ್ ಕುಂಞಿ ಮಾಸ್ಟರ್, ಆರಿಫ್ ಕಮ್ಮಾಜೆ, ಸಿರಾಜ್ ಬಡಕಬೈಲು,ಹಾರಿಸ್ ಅಡ್ಡೂರು, ಇಕ್ಬಾಲ್ ಕುಕ್ಕಟ್ಟೆ, ಮುಸ್ತಫಾ ಸೈಟ್, ಇಕ್ಬಾಲ್ ಸೈಟ್, ದಾವೂದ್ ಸೈಟ್ ಉಪಸ್ಥಿತರಿದ್ದರು.
2018-20ನೆ ಸಾಲಿನ ಸಮಿತಿಯ ಅಧ್ಯಕ್ಷರಾಗಿ ಬಶೀರ್ ಸಾಗರ್, ಉಪಾಧ್ಯಕ್ಷರಾಗಿ ಮುಸ್ತಫಾ, ಪ್ರಧಾನ ಕಾರ್ಯದರ್ಶಿಯಾಗಿ ಅಕ್ಬರ್ ಕೆಲಗಿನಕೆರೆ, ಕೋಶಾಧಿಕಾರಿ ಜಬ್ಬಾರ್ ಕಳಸಗುರಿ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಸಲಾಂ, ಇಬಾದ್ ಉಸ್ತುವಾರಿ ಕಾರ್ಯದರ್ಶಿಯಾಗಿ ಹಾಫಿಝ್ ಮುನವ್ವರ್, ವಿಖಾಯ ಕಾರ್ಯದರ್ಶಿಯಾಗಿ ದಾವೂದ್ ಕಳಸಗುರಿ, ಸಹಚಾರಿ ಕಾರ್ಯದರ್ಶಿಯಾಗಿ ಶಮೀಮ್ ಕಟಪುಣಿ, ಟ್ರೆಂಡ್ ಕಾರ್ಯದರ್ಶಿಯಾಗಿ ಜುನೈದ್ ಟಿಬೇಟ್, ಸರ್ಗಾಲಯ ಕಾರ್ಯದರ್ಶಿಯಾಗಿ ಮುಹಮ್ಮದ್ ಶರೀಫ್ ಪೊನ್ನೆಲ ಹಾಗೂ ಕ್ಯಾಂಪಸ್ ಕಾರ್ಯದರ್ಶಿಯಾಗಿ ಅಶ್ಫಕ್ ಕೆಲಗಿನಕೆರೆ, ಕೌನ್ಸಿಲರ್ ಆಗಿ ಮುಹಮ್ಮದ್ ಕುಂಞಿ ಮಾಸ್ಟರ್, ಅಹ್ಮದ್ ಬಾವ, ಹಾರಿಸ್ ಅಡ್ಡೂರು, ಮುಸ್ತಫಾ ಕಟಪುಣಿ, ಹಂಝ ಕಟಪುಣಿ, ಕಬೀರ್ ಅಝ್ಹರಿ ಅವರನ್ನು ಆಯ್ಕೆಮಾಡಲಾಯಿತು.