×
Ad

ಬರೋಬ್ಬರಿ 13 ಸಾವಿರ ಸಿಬ್ಬಂದಿಯನ್ನು ವಜಾ ಮಾಡಿದ ರೈಲ್ವೆ

Update: 2018-02-10 20:12 IST

ಅಮರಾವತಿ, ಫೆ. 10: ಭಾರತೀಯ ರೈಲ್ವೆ ದೀರ್ಘಾವಧಿವರೆಗೆ ಅನಧಿಕೃತವಾಗಿ ಗೈರು ಹಾಜರಾದ ತನ್ನ 13 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಗುರುತಿಸಿದೆ ಹಾಗೂ ಆರಂಭಿಕ ಶಿಸ್ತು ಕ್ರಮವಾಗಿ ಅವರನ್ನು ಸೇವೆಯಿಂದ ವಜಾಗೊಳಿಸಿದೆ.

 ರೈಲ್ವೆಯ ಸಾಮರ್ಥ್ಯ ಸುಧಾರಿಸಲು, ಉದ್ಯೋಗಿಗಳ ಪ್ರಾಮಾಣಿಕತೆ ಹಾಗೂ ಶ್ರದ್ಧೆ ಉತ್ತೇಜಿಸಲು ರೈಲ್ವೆ ಈ ಕ್ರಮ ಕೈಗೊಂಡಿದೆ. ಈಗ ತೆಗೆದುಕೊಂಡ ಕ್ರಮ ಅಭಿಯಾನದ ಒಂದು ಭಾಗ ಎಂದು ರೈಲ್ವೆ ಹೇಳಿದೆ.

 ರೈಲ್ವೆಯ ವಿವಿಧ ವಿಭಾಗಗಳಲ್ಲಿ ದೀರ್ಘಾವಧಿ ರಜೆ ಹಾಕಿರುವವರನ್ನು ಗುರುತಿಸುವ ಸಾಮೂಹಿಕ ಕಾರ್ಯ ಆರಂಭಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ 13 ಲಕ್ಷ ಉದ್ಯೋಗಿಗಳಲ್ಲಿ 13 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಅನಧಿಕೃತವಾಗಿ ದೀರ್ಘಾವಧಿ ಗೈರು ಹಾಜರಾಗಿರುವುದು ಪತ್ತೆಯಾಗಿದೆ ಎಂದು ರೈಲ್ವೆ ಹೇಳಿದೆ.

ಅನಧಿಕೃತವಾಗಿ ರಜೆ ಹಾಕುವ ಉದ್ಯೋಗಿಗಳನ್ನು ತೆಗೆದು ಹಾಕಲಾಗುವುದು ಎಂದು ಎಲ್ಲ ಅಧಿಕಾರಿಗಳು, ಉಸ್ತುವಾರಿಗಳಿಗೆ ರೈಲ್ವೆ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News