×
Ad

ಕಳವು ಪ್ರಕರಣ: ಆರೋಪಿ ಬಂಧನ

Update: 2018-02-10 21:46 IST

ಮಂಗಳೂರು, ಫೆ. 10: ಚಿನ್ನದ ಕರಿಮಣಿ ಸರ ಮತ್ತು ಲ್ಯಾಪ್‌ಟಾಪ್ ಇದ್ದ ಬ್ಯಾಗ್‌ನ್ನು ಕದ್ದ ಆರೋಪಿಯೋರ್ವನನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ನಿವಾಸಿ ಸನು ವರ್ಗೀಸ್ (39) ಬಂಧಿತ ಆರೋಪಿ.

ಈತ ಫೆ.1ರಂದು ರಾತ್ರಿ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಬೆಂಗಳೂರಿಗೆ ತೆರಳುತ್ತಿದ್ದ ಪ್ರಯಾಣಿಕರ ಬ್ಯಾಗ್‌ನ್ನು ಕಳವು ಮಾಡಿದ್ದ. ಆರೋಪಿಯಿಂದ 2.5 ಲಕ್ಷ ರೂ. ಮೌಲ್ಯದ ಚಿನ್ನದ ಸರ, 1.5 ಲಕ್ಷ ರೂ. ಮೌಲ್ಯ ಲೆನೋವೋ ಕಂಪೆನಿಯ ಲ್ಯಾಪ್‌ಟಾಪ್ ಮತ್ತು ದಾಖಲಾತಿಗಳು ಇದ್ದ ಬ್ಯಾಗ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬರ್ಕೆ ಠಾಣಾ ಪೊಲೀಸ್ ನಿರೀಕ್ಷಕ ರಾಮಕೃಷ್ಣ ಕೆ.ಕೆ. ಅವರ ನೇತೃತ್ವದಲ್ಲಿ ಬರ್ಕೆ ಠಾಣಾ ಪಿಎಸ್‌ಐಗಳಾದ ಯೋಗೀಶ್ವರನ್ ಹಾಗೂ ಪ್ರಕಾಶ್ ಕೆ., ಸಿಬ್ಬಂದಿ ಗಳಾದ ಗಣೇಶ್, ಮಹೇಶ್ ಪಾಟೀಲ್, ನಾಗರಾಜ್ ಚಂದರಗಿ, ಕೃಷ್ಣಪ್ಪ ನಂದ್ಯಾಲ್ ಮತ್ತು ಸಿದ್ದನಗೌಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News