×
Ad

ರಜಿನಿಕಾಂತ್ ರದ್ದು ಕೇಸರಿ ಬಣ್ಣವಲ್ಲ ಎಂಬ ನಂಬಿಕೆಯಿದೆ: ಕಮಲ್ ಹಾಸನ್

Update: 2018-02-11 13:39 IST

ಹೊಸದಿಲ್ಲಿ, ಫೆ.11: ರಜಿನಿಕಾಂತ್ ಜೊತೆಗಿನ ರಾಜಕೀಯ ಮೈತ್ರಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಮಲ್ ಹಾಸನ್ ಸದ್ಯದ ಪರಿಸ್ಥಿತಿಗೆ ಮೈತ್ರಿ ಅಸಾಧ್ಯವಾಗಿದ್ದು, ರಜಿನಿಕಾಂತ್ ಅವರದ್ದು ಕೇಸರಿ ಬಣ್ಣವಾಗಿರಲಾರದು ಎಂಬ ನಂಬಿಕೆಯಿದೆ ಎಂದಿದ್ದಾರೆ.

“ನಮ್ಮ ವಿಧಾನವೇ ಬೇರೆಯಾಗಿದೆ. ರಜಿನಿಕಾಂತ್ ಅವರ ಮೊದಲ ಘೋಷಣೆ ಬೇರೆಯದೇ ರೀತಿಯಲ್ಲಾಗಿತ್ತು. ಅದು ಕೇಸರಿ ಅಲ್ಲವೆಂದು ನನಗೆ ನಂಬಿಕೆಯಿದೆ” ಎಂದು ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕಮಲ್ ಹಾಸನ್ ಹೇಳಿದರು.

ತಮಿಳುನಾಡಿನ ಹಲವು ವಿಚಾರಗಳ ಬಗ್ಗೆಯೂ ಮಾತನಾಡಿದ ಅವರು, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಒಂದು ಗ್ರಾಮವನ್ನು ದತ್ತು ಪಡೆಯುವ ಯೋಜನೆಯಿದೆ. ಅವುಗಳನ್ನು ವಿಶ್ವದಲ್ಲೇ ಅತ್ಯುತ್ತಮ ಗ್ರಾಮಗಳನ್ನಾಗಿಸುವ ಉದ್ದೇಶವಿದೆ” ಎಂದವರು ಹೇಳಿದರು

ತಮಿಳುನಾಡಿನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದ ಕಮಲ್ ರಾಜ್ಯದ ರಾಜಕೀಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ನಾನು ಜನರೊಂದಿಗೆ ನಡೆಯಲು ಬಯಸುತ್ತೇನೆ ಹೊರತು ರಾಜಕಾರಣಿಗಳೊಂದಿಗಲ್ಲ. ಅದಕ್ಕಾಗಿ ಯೇ ರಾಜಕೀಯ ಪಕ್ಷವನ್ನು ಸ್ಥಾಪಿಸಿದೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News