15 ತಿಂಗಳು ಕಳೆದರೂ ಹಳೆಯ 500, 1000ದ ನೋಟುಗಳೊಂದಿಗೆ ಏಗುತ್ತಿರುವ ಆರ್ ಬಿಐ!
Update: 2018-02-11 15:18 IST
ಹೊಸದಿಲ್ಲಿ, ಫೆ.11: ಕಳೆದ 15 ತಿಂಗಳ ಹಿಂದೆ 500 ಹಾಗು 1000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಲಾಗಿದ್ದರೂ ಇನ್ನೂ ಆ ನೋಟುಗಳನ್ನು ವಿಲೇವಾರಿ ಮಾಡಲಾಗುತ್ತಿದೆ ಎಂದು ಆರ್ ಬಿಐ ಹೇಳಿದೆ.
ಸರಿಯಾದ ಲೆಕ್ಕಾಚಾರ ಹಾಗು ಪ್ರಾಮಾಣಿಕತೆಗಾಗಿ ಅತ್ಯಂತ ವೇಗವಾಗಿ ಈ ಕೆಲಸ ನಡೆಯುತ್ತಿದೆ ಎಂದು ಆರ್ ಬಿಐ ಆರ್ ಟಿಐ ಅರ್ಜಿಯೊಂದಕ್ಕೆ ಉತ್ತರಿಸಿದೆ.
ಅಮಾನ್ಯಗೊಂಡ ನೋಟುಗಳ ಸಂಖ್ಯೆಯ ಬಗೆಗಿನ ಪ್ರಶ್ನೆಗೆ ಉತ್ತರಿಸಿರುವ ಆರ್ ಬಿಐ,”2017ರ ಜೂನ್ 30ರ ಪ್ರಕಾರ ಸ್ವೀಕರಿಸಲ್ಪಟ್ಟ ಬ್ಯಾಂಕ್ ನೋಟುಗಳ ಮೊತ್ತವು 15.28 ಟ್ರಿಲಿಯನ್ ಗಳು (ಲಕ್ಷ ಕೋಟಿ)” ಎಂದಿದೆ.
ಅಮಾನ್ಯಗೊಂಡ ನೋಟುಗಳ ಎಣಿಕೆಯ ಕೊನೆಯ ದಿನಾಂಕದ ಬಗ್ಗೆ ಉತ್ತಿರಿಸಿರುವ ಆರ್ ಬಿಐ, “ನೋಟುಗಳ ಸಂಸ್ಕರಣೆಯು ಅತ್ಯಂತ ವೇಗವಾಗಿ ನಡೆಯುತ್ತಿದೆ” ಎಂದಿದೆ.