ಡಿವೈಎಫ್ ಐ ಅದ್ಯಪಾಡಿ ಘಟಕದ ಆಶ್ರಯದಲ್ಲಿ ರಕ್ತದಾನ ಶಿಬಿರ
Update: 2018-02-11 15:28 IST
ಅದ್ಯಪಾಡಿ,ಫೆ.11 ಜಿಲ್ಲೆಯ ಯುವಜನ ಚಳುವಳಿಗೆ ನಾಯಕತ್ವ ಕೊಟ್ಟಿದ್ದಂತಹ ಸಂಗಾತಿ ರಮೇಶ್ ಕುಮಾರ್ ಅದ್ಯಪಾಡಿ ಸ್ಮರಣಾರ್ಥ ಡಿವೈಎಫ್ ಐ ಅದ್ಯಪಾಡಿ ಘಟಕದ ಆಶ್ರಯದಲ್ಲಿ ಇಂದು ರಕ್ತದಾನ ಶಿಬಿರವು ಅದ್ಯಪಾಡಿ ಸರಕಾರಿ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಿವೈಎಫ್ ಐ ನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ನೆರವೇರಿಸಿದರು ಈ ವೇಳೆ ಮುಖ್ಯ ಅತಿಥಿಗಳಾಗಿ ಡಿಎಸ್ಎಸ್ ನ ಜಿಲ್ಲಾ ಸಂಘಟಕರಾದ ಕೃಷ್ಣಾನಂದ, ಡಿವೈಎಫ್ಐ ನಗರಾದ್ಯಕ್ಷರಾದ ನವೀನ್ ಕೊಂಚಾಡಿ, ಸ್ಥಳೀಯರಾದ ಪುಷ್ಪರಾಜ್ ಕುಲಾಲ್, ಘಟಕದ ಅದ್ಯಕ್ಷರಾದ ಟಿ.ಉಸ್ಮಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನೇತೃತ್ವವನ್ನು ಸ್ಥಳೀಯ ಮುಖಂಡರಾದ ಬದ್ರುದ್ದೀನ್, ಸಿದ್ದಿಕ್, ಖಾದರ್ ,ನಿಝಾಮುದ್ದೀನ್, ರಶೀದ್ ಮುಂತಾದವರು ವಹಿಸಿದ್ದರು.