×
Ad

ಮುಡಿಪು ಕಾಲೇಜಿನಲ್ಲಿ 'ಲಿಂಗ ಸೂಕ್ಶ್ಮತೆ’ ಕಾರ್ಯಾಗಾರ

Update: 2018-02-11 16:31 IST

ಕೊಣಾಜೆ,ಫೆ.11: ಭಾರತಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷಗಳು ಸಂದರೂ ಕೂಡಾ ಮಹಿಳಾ ಸಬಲೀಕರಣ ಸಾಕಷ್ಟು ಮಟ್ಟಿಗೆ ನಡೆದಿಲ್ಲ. ಮಹಿಳೆಯರ ಲಿಂಗಾನುಪಾತಕ್ಕೆ ಅನುಗುಣವಾಗಿ ವಿವಿಧ ಕ್ಷೇತ್ರಗಳಾದ ಶಿಕ್ಷಣ, ಉದ್ಯೋಗ, ಮತ್ತು ರಾಜಕೀಯದಲ್ಲಿ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದು ಮಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಅನಿತಾ ರವಿಶಂಕರ್ ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರ ಮತ್ತು ಮಹಿಳಾ ವೇದಿಕೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಪು ಇದರ ಸಂಯುಕ್ತ ಆಶ್ರಯದಲ್ಲಿ ‘ಲಿಂಗ ಸೂಕ್ಶ್ಮತೆ’ ಎಂಬ ವಿಷಯದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಇಂದು ಜಗತ್ತು ಇಷ್ಟು ಬದಲಾಗಿದ್ದರೂ ಕೂಡಾ ಮಹಿಳಾ ದೌರ್ಜನ್ಯವೂ ಕೂಡಾ ಹೆಚೆಚ್ಚು ವರದಿಯಾಗುತ್ತಲೇ ಇವೆ. ಹಾಗಾಗಿ ಮಹಿಳಾ ಸಬಲೀಕರಣ ಇಂದಿನ ಅಗತ್ಯಗಳಲ್ಲಿ ಒಂದಾಗಿದೆ. ಇಂತಹ ಕಾರ್ಯಾಗಾರಗಳಿಂದ ವಿದ್ಯಾರ್ಥಿಗಳಲ್ಲಿ ಶಕ್ತಿ ತುಂಬಲು ಸಾಧ್ಯ ಎಂದರು.

ಕಾರ್ಯಾಗಾರವನ್ನು ಮಂಗಳೂರಿನ  ಹಿತ ಸಂಪನ್ಮೂಲ ಕೇಂದ್ರದ  ಸಂಪನ್ಮೂಲ ವ್ಯಕ್ತಿಗಳಾದ ಮಂಜುಳಾ ಸುನಿಲ್ ಮತ್ತು  ಮಲ್ಲಿಕಾ ಇವರು ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ, ಡಾ.ಗಿರಿಧರ ರಾವ್. ಎಂ.ಎಸ್. ಇವರು ವಹಿಸಿದ್ದರು. ಕಾಲೇಜಿನ ಮಹಿಳಾ ವೇದಿಕೆಯ ಸಂಯೋಜಕರಾದ ವತ್ಸಲ.ಪಿ. ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿಯಾದ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಫಾತಿಮತ್ ತಸ್ವ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News