ಯುವತಿಯ ಅತ್ಯಾಚಾರಕ್ಕೆ ಯತ್ನ: ಅರ್ಚಕನ ಬಂಧನ
Update: 2018-02-11 19:25 IST
ಪಾಂಬಡಿ(ಕೇರಳ),ಫೆ.11: ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ಕೂರೊಪ್ಪಡಮ್ಮಾಡಪ್ಪಾಡ್ ದೇವಳದ ಅರ್ಚಕನನ್ನು ಪಾಂಬಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸನೇಶ್ ಕುಮಾರ್(38) ಎಂದು ಗುರುತಿಸಲಾಗಿದೆ.
ಶುಕ್ರವಾರ ಪಾಂಬಾಡಿ ಪೊಲೀಸ್ ಠಾಣೆಗೆ ಯುವತಿ ಮತ್ತು ಆಕೆಯ ಪತಿ ದೂರು ನೀಡಿದ್ದರು. ಪಾಂಬಾಡಿ ಸರ್ಕಲ್ ಇನ್ಸ್‌ಪೆಕ್ಟರ್ ಯು. ಶ್ರೀಜಿತ್ ನೇತೃತ್ವದಲ್ಲಿ ಶುಕ್ರವಾರ ಅರ್ಚಕನನ್ನು ಬಂಧಿಸಲಾಗಿದೆ.
2015ರಲ್ಲಿ ಯುವತಿಯ ಅಪ್ರಾಪ್ತ ಸಹೋದರಿಗೆ ಕಿರುಕುಳ ನೀಡಿದ್ದಕ್ಕಾಗಿ ನೂರನ್ನಾಡ್ ಪೊಲೀಸರು ಈತನನ್ನು ಬಂಧಿಸಿದ್ದರು. ಕೋಟ್ಟಯಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಆರೋಪಿಯನ್ನು ಹಾಜರು ಪಡಿಸಲಾಗಿದ್ದು, ಆತನಿಗೆ ಹದಿನಾಲ್ಕು ದಿನಗಳ ರಿಮಾಂಡ್ ವಿಧಿಸಲಾಗಿದೆ.