ಮಣಿಪಾಲ ಸಿಲ್ವರ್ ಮ್ಯಾರಾಥಾನ್: ಇಥಿಯೋಪಿಯದ ಯೆಮ್ಟಾ -ಯೆನೆಮ್‌ಗೆ ಪ್ರಶಸ್ತಿ
ಮಣಿಪಾಲ, ಫೆ.11: ಮಣಿಪಾಲ ಮಾಹೆ ಮತ್ತು ಸಿಂಡಿಕೇಟ್ ಬ್ಯಾಂಕ್ ಹಾಗೂ ಅದಾನಿ ಯುಪಿಸಿಎಲ್, ಜಿಲ್ಲಾ ಅಮೆಚ್ಯೂರ್ ಅಥ್ಲೆಟಿಕ್ಸ್ ಸಂಸ್ಥೆಯ ಸಹಯೋಗದೊಂದಿಗೆ ರವಿವಾರ ಮಣಿಪಾಲದಲ್ಲಿ ಹಮ್ಮಿಕೊಳ್ಳಲಾದ 21.1 ಕಿ.ಮೀ. ದೂರದ ‘ಸಿಲ್ವರ್ ಮ್ಯಾರಾಥಾನ್’ನ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಇಥಿಯೋಪಿಯದ ಮಿಕಿಯಾಸ್ ಯೆಮ್ಟಾ ಮತ್ತು ಝಿನಶ್ವರ್ ಯೆನೆಮ್ ಅಂಬಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಪುರುಷರ ವಿಭಾಗದಲ್ಲಿ ಶಿಜು ಸಿ.ಪಿ. ದ್ವಿತೀಯ, ಕಾಂತಿಲಾಲ್ ತೃತೀಯ ಮತ್ತು ಮಹಿಳೆಯರ ವಿಭಾಗದಲ್ಲಿ ಅರ್ಚನಾ ಕೆ ದ್ವೀತಿಯ, ಶಾಲಿನಿ ಕೆ.ಕೆ. ತೃತೀಯ ಸ್ಥಾನ ಪಡೆದರು. ಈ ಎರಡು ವಿಭಾಗದ ವಿಜೇತರು ಪ್ರಥಮ 75ಸಾವಿರ ರೂ., ದ್ವಿತೀಯ 35ಸಾವಿರ ರೂ., ತೃತೀಯ 20ಸಾವಿರ ರೂ. ನಗದು ಬಹುಮಾನವನ್ನು ನೀಡಲಾಯಿತು.
21ಕಿ.ಮೀ. 35-55 ವರ್ಷ ಪುರುಷರ ವಿಭಾಗ: ಪ್ರ-ಅಡಿನಾಲ್ ಮೆಕೊ ನೆನ್, ದ್ವಿ- ಚಂದ್ರಶೇಖರ್ ಎ., ತೃ-ಶ್ಯಾಜಿ ಎನ್.ಪಿ., ಮಹಿಳೆಯರ ವಿಭಾಗ: ಪ್ರ-ಸವಿತಾ ಶಾಸ್ತ್ರಿ, ದ್ವಿ-ಜ್ಯೋತಿ ಉದಯ ಶೆಟ್ಟಿ.
56 ವರ್ಷ ಮೇಲ್ಪಟ್ಟವರ ಪುರುಷರ ವಿಭಾಗ: ಪ್ರ-ಸದಾನಂದ ಪಿಳ್ಳೈ, ಮಹಿಳೆಯರ ವಿಭಾಗ: ಪ್ರ- ಸುಲಾತಾ ಕಾಮತ್. ಮಾಹೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ವಿಭಾಗ: ಪ್ರ-ಸುದೀಪ್ ಕುಮಾರ್, ದ್ವಿ-ಮುಕುಲ್ ರಾಜ್.
16ವರ್ಷ ಮೇಲ್ಪಟ್ಟ ಮಹಿಳೆಯರ 10 ಕಿ.ಮೀ. ಮಹಿಳೆಯರ ಓಟ: ಪ್ರ- ಸಲೈಮೆಂಗ್, ದ್ವಿ- ಸುಪ್ರಿತಾ ಬಿ.ಕೆ., ತೃ-ತಿಪಾವ್ವಾ ಸನಕ್ಕಿ. ಪುರುಷರ ವಿಭಾಗ: ಪ್ರ-ಅಮಾನುಯೆಲ್ ಅಬ್ದು, ದ್ವಿ-ವಿನಯ್ ಕುಮಾರ್, ತೃ- ಚೆಥಾನ್ ಜಿ.ಜೆ.
35-55 ವರ್ಷದೊಳಗಿನ ಮಹಿಳೆಯರ ಓಟ: ಪ್ರ-ಯೂಲಿಯಾ ಪೊನಾ ರೆರೆವಾ, ದ್ವಿ-ನೋಪಾರ್ ಕೌಶಾಕ್, ತೃ-ರೆಬಾ ಫಿಲಿಪೊಸ್. ಪುರುಷರ ವಿಭಾಗ: ಪ್ರ-ಸೈಫ್ ಹಸನ್, ದ್ವಿ-ಮಾಧವ ಸರಪಲ್ಲ, ತೃ-ಗಣೇಶ್ ಪೂಜಾರಿ. 56 ವರ್ಷ ಮೇಲ್ಪಟ್ಟ ವಿಭಾಗ: ಅರುಣಾ ಕಲಾ ಎಸ್.ರಾವ್. ಪುರುಷರ ವಿಭಾಗ: ಪ್ರ- ರಾಮಿಯನ್.
10ವರ್ಷ ಮೇಲ್ಪಟ್ಟ ಬಾಲಕರ 5 ಕಿ.ಮೀ. ಓಟ: ಪ್ರ-ಅನಿಲಾ ಕುಮಾರ, ದ್ವಿ-ಪ್ರಶಾಂತ್ ಕುಮಾರ್, ತೃ-ಚಿದಾನಂದ್.
35-55 ವರ್ಷದೊಳಗಿನ ವಿಭಾಗ: ಪ್ರ-ಅಂಥೋನಿ, ದ್ವಿ-ಚಂದನ್.
56 ವರ್ಷ ಮೇಲ್ಪಟ್ಟವರ ಪುರುಷರ ವಿಭಾಗ: ಪ್ರ-ದತ್ಯಾನಂದ ನಾಯಕ್. ಮಹಿಳೆಯರ ವಿಭಾಗ: ಸಂಧ್ಯಾ ಕಾಮತ್.
ಕಾರ್ಪೊರೇಟ್ ವಿಭಾಗ: ಪ್ರ-ಬಿನು ಪ್ರಕಾಶ್. ಮಹಿಳೆಯರ: ಪ್ರ-ಜೆನ್ಸಿ ಜೋಸೆಫ್.
ಮ್ಯಾರಥಾನ್‌ಗೆ ಮಣಿಪಾಲ ಎಜ್ಯುಕೇಶನ್ ಕಟ್ಟಡದ ಎದುರು ಅದಾನಿ ಯುಪಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಚಾಲನೆ ನೀಡಿ ದರು. ಮಣಿಪಾಲ ಗ್ರೀನ್ಸ್‌ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ರಿಗೆ ಬಹುಮಾನ ವಿತರಿಸಲಾಯಿತು.
ಅಧ್ಯಕ್ಷತೆಯನ್ನು ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ವಹಿಸಿ ದ್ದರು. ಮುಖ್ಯ ಅತಿಥಿಗಳಾಗಿ ಕಿಶೋರ್ ಆಳ್ವ, ಮಾಹೆ ಡಾ.ಎಚ್.ವಿನೋದ್ ಭಟ್, ಸಹಕುಲಪತಿಗಳಾದ ಡಾ.ವಿ.ಸುರೇಂದ್ರ ಶೆಟ್ಟಿ, ಡಾ.ಪೂರ್ಣಿಮಾ ಬಾಳಿಗಾ, ಕುಲಸಚಿವ ಡಾ.ನಾರಾಯಣ ಸಭಾಹಿತ್, ಸಿಂಡಿಕೇಟ್ ಬ್ಯಾಂಕಿನ ಜನರಲ್ ಮೆನೇಜರ್ ಸತೀಶ್ ಕಾಮತ್, ಉದ್ಯಮಿ ಪುರುಷೋತ್ತಮ ಶೆಟ್ಟಿ, ವೊಡಾಫೋನ್ ಮುಖ್ಯಸ್ಥ ಸಂತೋಷ್ ಪುತ್ತೂರು, ಮಣಿಪಾಲ ಮ್ಯಾರಾಥಾನ್ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ರಘುಪತಿ ಭಟ್ ಉಪಸ್ಥಿತರಿದ್ದರು.
ಎಲ್ಲ ವಿಭಾಗದಲ್ಲಿ ಒಟ್ಟು 7ಸಾವಿರ ಸ್ಪರ್ಧಾಳುಗಳು ಭಾಗವಹಿಸಿದ್ದರು.