×
Ad

ಮುಕ್ಕಚ್ಚೇರಿ ಝುಬೈರ್ ಕೊಲೆ ಪ್ರಕರಣ: ಮತ್ತೊಬ್ಬ ಆರೋಪಿಯ ಬಂಧನ

Update: 2018-02-11 20:58 IST

ಉಳ್ಳಾಲ, ಫೆ. 11: ಉಳ್ಳಾಲದಲ್ಲಿ ನಡೆದ ಝುಬೈರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಉಳ್ಳಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲ ನಿವಾಸಿ ಕಡಪ್ಪರ ನಾಸಿರ್ (27) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಮುಕ್ಕಚ್ಚೇರಿಯ ಝುಬೈರ್ ಎಂಬವರನ್ನು ಮೂರು ತಿಂಗಳ ಹಿಂದೆ ತಂಡವೊಂದು ಮುಕ್ಕಚ್ಚೇರಿಯಲ್ಲಿ ಇರಿದು ಕೊಲೆ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಆಸಿಫ್, ನಿಝಾಮ್, ಸುಹೈಲ್ ಸೇರಿದಂತೆ ಒಟ್ಟು ನಾಲ್ಕು ಮಂದಿಯನ್ನು ಈ ಹಿಂದೆ ಪೊಲೀಸರು ಬಂದಿಸಿದ್ದು, ಇದೀಗ ಕಡಪ್ಪರ ನಾಸಿರ್‌ ನನ್ನು ಉಳ್ಳಾಲ ಇನ್ಸ್‌ಪೆಕ್ಟರ್ ಗೋಪಿ ಕೃಷ್ಣ ಅವರ ಮಾಹಿತಿ ಮೇರೆಗೆ ಬಂಧಿಸಿದ್ದು, ಪ್ರಮುಖ ಆರೋಪಿ ಮಂದ ಅಲ್ತಾಫ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಶೋಧ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News