×
Ad

ಸ್ವಚ್ಛ ಮಂಗಳೂರು ಅಭಿಯಾನದ 15ನೆ ಶ್ರಮದಾನ

Update: 2018-02-11 21:23 IST

ಮಂಗಳೂರು, ಫೆ.11: ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 4ನೆ ಹಂತದ 15ನೆ ಶ್ರಮದಾನವು ನಗರದ ಫಳ್ನಿರ್‌ನಲ್ಲಿ ರವಿವಾರ ನಡೆಯಿತು.

ಸ್ವಾಮಿ ಜಿತಕಾಮಾನಂದಜಿ ಮಹರಾಜ್ ಹಾಗೂ ಸ್ವಾಮಿ ಸರ್ವಸ್ಥಾನಂದಜಿ ಮಹರಾಜ್ ಸಮ್ಮುಖದಲ್ಲಿ ಪ್ರೊ.ರಘೋತ್ತಮ್ ರಾವ್, ಡಾ. ನಂದಿತಾ ಶೆಣೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸುಮಾರು 400 ಮಂದಿಯ 8 ತಂಡಗಳು ನಗರದ ವಿವಿಧೆಡೆ ಶ್ರಮದಾನ ಮಾಡಿತು. ಅಭಿಯಾನದ ಮಾರ್ಗದರ್ಶಿ ಕ್ಯಾ. ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಮುಹಮ್ಮದ್ ಶಮೀಮ್, ಮಸಾರೋ, ಡಾ. ರಾಜೇಂದ್ರ ಪ್ರಸಾದ ಮತಿತ್ತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News