ಚಿತ್ರದುರ್ಗ ಜಿಲ್ಲಾ ಎಸ್.ವೈ.ಎಸ್: ಪದಾಧಿಕಾರಿಗಳಾಗಿ ಮುನೀರ್ ಮುಲ್ಲಾ, ನವಾಬ್ ಹಸನ್, ಫಝಲುಲ್ಲಾ
ಮಂಗಳೂರು, ಫೆ. 11: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್.ವೈ.ಎಸ್) ಇದರ ಚಿತ್ರದುರ್ಗ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಇಂಜಿನಿಯರ್ ಮುನೀರ್ ಮುಲ್ಲಾ ಹಿರಿಯೂರ್, ಉಪಾಧ್ಯಕ್ಷರಾಗಿ ಅಬ್ದುಲ್ ರಹೀಂ ಕಮಾನ್ ಬಾವಿ, ಜಮೀಲ್ ಮೊಲಕಾಲ್ಮೂರು, ಪ್ರಧಾನ ಕಾರ್ಯ ದರ್ಶಿಯಾಗಿ ಪ್ರೊಫೆಸರ್ ನವಾಬ್ ಹಸನ್ ಚಿತ್ರದುರ್ಗ, ಜತೆ ಕಾರ್ಯದರ್ಶಿಯಾಗಿ ಅಬ್ದುಲ್ ಸಮದ್ ಹಿರಿಯೂರು, ಮುಹಮ್ಮದ್ ಹಯಾತ್ ಬುರ್ಜಿನ ಹಟ್ಟಿ, ಹಾಗೂ ಕೋಶಾಧಿಕಾರಿಯಾಗಿ ಫಝಲುಲ್ಲಾಹ್ ಮೆದೆಹಳ್ಳಿ ಅವರನ್ನು ಹಾಗೂ ಹದಿನೆಂಟು ಮಂದಿ ಕಾರ್ಯಕಾರಿ ಸದಸ್ಯರನ್ನು ಆರಿಸಲಾಯಿತು.
ಚಿತ್ರದುರ್ಗ ಮದ್ರಸಾ ಅಂಜುಮನ್ ಇಸ್ಲಾಮಿಯಾ ಸಭಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಜಿಎಂಎಂ ಕಾಮಿಲ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನೀ ಕಾಮಿಲ್ ಚುನಾವಣೆಗೆ ನೇತೃತ್ವ ನೀಡಿದರು. ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬೂಸುಫ್ಯಾನ್ ಮದನಿ ಉದ್ಘಾಟಿಸಿದರು.
ಎಸ್ಎಸ್ಎಫ್ ಜಿಲ್ಲಾಧ್ಯಕ್ಷ ಅಡ್ವಕೆಟ್ ಝುಲ್ಫಿಕರ್ ಸ್ವಾಗತಿಸಿದರು, ಅಲ್ ಹಾಫಿಳ್ ಆದಂ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜುನೈದ್ ಸಖಾಫಿ ಅಲ್ ಅಶ್ರಫಿ ಕಾರ್ಯಕ್ರಮ ನಿರೂಪಿಸಿದರು.