ಕಾರ್ಕಳ; ಚೂರಿಯಿಂದ ತಿವಿದು ಕೊಲೆಯತ್ನ
Update: 2018-02-11 22:28 IST
ಕಾರ್ಕಳ, ಫೆ.11: ಕಾರ್ಕಳ ಎಸ್.ವಿ.ಟಿ. ಶಾಲಾ ರಸ್ತೆಯ ಬಳಿ ಜ್ಯೋತಿ ಕಾಂಪ್ಲೆಕ್ಸ್‌ನಲ್ಲಿ ಚಿನ್ನ,ಬೆಳ್ಳಿ ಆಭರಣ ಕೆಲಸ ಮಾಡುವ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿರುವ ಘಟನೆ ಫೆ.10ರಂದು ಸಂಜೆ 5.30ರ ಸುಮಾರಿಗೆ ನಡೆದಿದೆ.
ಅಂಗಡಿ ಕೋಣೆಗೆ ಮೂವರು ದುಷ್ಕರ್ಮಿಗಳು ಅಕ್ರಮ ಪ್ರವೇಶ ಮಾಡಿ ಚಿನ್ನಬೆಳ್ಳಿ ಆಭರಣ ಕೆಲಸ ಮಾಡುತ್ತಿದ್ದ ಕಾರ್ಕಳ ದುರ್ಗಾ ಗ್ರಾಮದ ನಾಗೇಶ್ ಆಚಾರ್ಯ ಎಂಬವರನ್ನು ಚೂರಿಯಿಂದ ತಿವಿದು ಕೊಲೆ ಮಾಡಲು ಪ್ರಯತ್ನಿ ಸಿದ್ದು ಅವಿನಾಶ್ ಎಂಬಾತ ಈ ಕೃತ್ಯಕ್ಕೆ ಒಳಸಂಚು ರೂಪಿಸಿರುವುದಾಗಿ ದೂರ ಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.