ಮುಂಡಗೋಡ: ರಸ್ತೆ ಅಪಘಾತಕ್ಕೆ ಬೈಕ್ ಸವಾರ ಮೃತ್ಯು
Update: 2018-02-11 22:51 IST
ಮುಂಡಗೋಡ, ಫೆ. 11: ಬೈಕ್ ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಕಾತೂರ ಗ್ರಾಮದ ಫಾರೆಸ್ಟ ವಸತಿ ಗೃಹ ಹತ್ತಿರ ರವಿವಾರ ನಡೆದಿದೆ.
ಮೃತ ಬೈಕ್ ಸವಾರನನ್ನು ಮುಂಡಗೋಡ ಪಟ್ಟಣದ ಕಲಾಲ ಓಣಿ ನಿವಾಸಿ ಜಹಾಂಗೀರ ಮಕ್ತುಂಸಾಬ ನಂದಿಗಟ್ಟಿ (52) ಎಂದು ಗುರುತಿಸಲಾಗಿದೆ. ಅವರು ವೃತ್ತಿಯಲ್ಲಿ ಚಾಲಕರಾಗಿದ್ದರು.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.