ಪುದು ಗ್ರಾಪಂ ಚುನಾವಣೆ: ಕಣದಲ್ಲಿ 81 ಅಭ್ಯರ್ಥಿಗಳು
Update: 2018-02-12 19:38 IST
ಫರಂಗಿಪೇಟೆ, ಪೆ 12: ಪುದು ಗ್ರಾಮ ಪಂಚಾಯತ್ ಚುನಾವಣೆ ಫೆ.18 ರಂದು ನಡೆಯಲಿದೆ. ಒಟ್ಟು 10 ವಾರ್ಡ್ ಗಳಲ್ಲಿ 34 ಸದಸ್ಯ ಸ್ಥಾನಗಳಿಗೆ 81 ಅಭ್ಯರ್ಥಿಗಳು ಕಣದಲ್ಲಿ ಸ್ಪರ್ದಿಸುತ್ತಿದ್ದಾರೆ, ಪರಿಶೀಲಿಸಿ ಸಿಂದುವಾದ 91 ನಾಮ ಪತ್ರದಲ್ಲಿ ಸೋಮವಾರ ನಾಮಪತ್ರ ಹಿಂದೆ ತೆಗೆಯಲು ಅವಕಾಶ ಇದ್ದು, 10 ವಾರ್ಡ್ ಗಳಲ್ಲಿ ಒಟ್ಟು 10 ಅಭ್ಯರ್ಥಿಗಳು ನಾಮಪತ್ರ ಹಿಂದೆ ತೆಗೆದಿದ್ದಾರೆ.