×
Ad

ಫೆ.14: ಉಡುಪಿ ಜಿಲ್ಲೆಯ 3 ನೂತನ ತಾಲೂಕುಗಳ ಉದ್ಘಾಟನೆ

Update: 2018-02-12 20:29 IST

ಉಡುಪಿ, ಫೆ.12: ರಾಜ್ಯ ಸರಕಾರದ ಉಡುಪಿ ಜಿಲ್ಲೆಗೆ ಘೋಷಿಸಿರುವ ನಾಲ್ಕು ಹೊಸ ತಾಲೂಕುಗಳಲ್ಲಿ ಮೂರು ತಾಲೂಕುಗಳನ್ನು ರಾಜ್ಯದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಫೆ.14ರಂದು ಉದ್ಘಾಟಿಸಲಿದ್ದಾರೆ.

ಫೆ. 14ರಂದು ಬೆಳಗ್ಗೆ 10:30ಕ್ಕೆ ಬೈಂದೂರಿನಲ್ಲಿ ಬೈಂದೂರು ತಾಲೂಕು ಉದ್ಘಾಟನೆ, ಅಪರಾಹ್ನ 12:30ಕ್ಕೆ ಬ್ರಹ್ಮಾವರದಲ್ಲಿ ಬ್ರಹ್ಮಾವರ ತಾಲೂಕು ಉದ್ಘಾಟನೆ ಹಾಗೂ 3 ಕ್ಕೆ ಕಾಪುನಲ್ಲಿ ಕಾಪು ಹೊಸ ತಾಲೂಕು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News