×
Ad

ಯುವಕ, ಯುವತಿಯರಿಗೆ ಪ್ರೀತಿಸುವ ಹಕ್ಕಿದೆ: ಪ್ರವೀಣ್ ತೊಗಾಡಿಯಾ

Update: 2018-02-12 20:36 IST

ಹೊಸದಿಲ್ಲಿ, ಫೆ.12: ಪ್ರೇಮಿಗಳ ದಿನಾಚರಣೆಯನ್ನು ಹಲವು ವರ್ಷಗಳಿಂದ ವಿಶ್ವ ಹಿಂದೂ ಪರಿಷತ್ ವಿರೋಧಿಸುತ್ತಿದ್ದರೂ  ಇದೀಗ ವಿಹಿಂಪದ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಬೇರೆಯದೇ ಹೇಳಿಕೆ ನೀಡಿದ್ದು, ಯುವ ಜನರಿಗೆ ಪ್ರೀತಿಸುವ ಹಕ್ಕಿದೆ ಎಂದು ಹೇಳಿದ್ದಾರೆ. ಪ್ರೇಮಿಗಳ ದಿನಾಚರಣೆ ಸಂದರ್ಭ ಯಾವುದೇ ಪ್ರತಿಭಟನೆ ಅಥವಾ ಹಿಂಸಾಚಾರ ನಡೆಯುವುದಿಲ್ಲ ಎಂದವರು ಹೇಳಿದ್ದಾರೆ.

ಚಂಢೀಗಡದಲ್ಲಿ ವಿಎಚ್ ಪಿ ಹಾಗು ಬಜರಂಗದಳ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರೀತಿ ಇಲ್ಲದಿದ್ದರೆ ವಿವಾಹ ನಡೆಯಲು ಸಾಧ್ಯವಿಲ್ಲ. ಯಾವುದೇ ಮದುವೆಗಳು ನಡೆಯದಿದ್ದರೆ ಜಗತ್ತು ಮುಂದುವರಿಯುವುದಿಲ್ಲ. ಯುವಕ ಯುವತಿಯರಿಗೆ ಪ್ರೀತಿಸುವ ಹಕ್ಕಿದೆ ಹಾಗು ಅವರಿಗೆ ಈ ಹಕ್ಕು ಲಭಿಸಬೇಕು ಎಂದು ತೊಗಾಡಿಯಾ ಹೇಳಿದರು.

ಪ್ರೇಮಿಗಳ ದಿನಾಚರಣೆ ವೇಳೆ ಪ್ರತಿಭಟನೆ ನಡೆಸಬಾರದು ಎಂದು ತಿಳಿಸಿದ ಅವರು, ನಮ್ಮ ಪುತ್ರಿಯರು ಹಾಗು ಸಹೋದರಿಯರಿಗೆ ಪ್ರೀತಿಸುವ ಹಕ್ಕಿದೆ  ಎಂದು ನಾನು ಈಗಾಗಲೇ ಹೇಳಿದ್ದೇನೆ ಎಂದಿದ್ದಾರೆ.

ಭಾರತದಲ್ಲಿ ಪ್ರೇಮಿಗಳ ದಿನಾಚರಣೆಯನ್ನು ವಿಎಚ್ ಪಿ ಮತ್ತು ಬಜರಂಗದಳ ವಿರೋಧಿಸುತ್ತಲೇ ಇವೆ. ಪ್ರೇಮಿಗಳ ದಿನಾಚರಣೆ ಭಾರತದ ಸಂಸ್ಕೃತಿಗೆ ವಿರುದ್ಧವಾದದ್ದು ಎನ್ನುವುದು ಇವರ ವಾದವಾಗಿದ್ದರೂ,ಇದೀಗ ವಿಎಚ್ ಪಿಯ ಪ್ರಮುಖ ನಾಯಕರೇ ಪ್ರೇಮಿಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದು ಎಲ್ಲರ ಹುಬ್ಬೇರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News