ಶ್ರೀಧರ ಹಂದೆಗೆ ‘ನಿಡಂಬೂರು ಬೀಡು ಬಲ್ಲಾಳ’ ಪ್ರಶಸ್ತಿ ಪ್ರದಾನ

Update: 2018-02-12 15:08 GMT

ಉಡುಪಿ, ಫೆ.12: ಅಂಬಲಪಾಡಿ ಶ್ರೀಲಕ್ಷ್ಮೀ ಜನಾರ್ದನ ಯಕ್ಷಗಾನ ಮಂಡಳಿಯ ವತಿಯಿಂದ ಕೋಟ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಶ್ರೀಧರ ಹಂದೆ ಅವರಿಗೆ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯನ್ನು ಅಂಬಲ ಪಾಡಿ ದೇವಳದಲ್ಲಿ ಶನಿವಾರ ಪ್ರದಾನ ಮಾಡಲಾಯಿತು.

ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಪ್ರಶಸ್ತಿ ಪ್ರದಾನ ಮಾಡಿ ಶುಭಹಾರೈಸಿದರು. ಕುತ್ಪಾಡಿ ಕಾನಂಗಿ ದೇವಸ್ಥಾನದ ಅನುಮಂಶಿಕ ಮೊಕ್ತೇಸರ ಡಾ.ಕೆ.ಆರ್.ಕೆ.ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಟ್ಟಿ ಲಕ್ಷ್ಮೀನಾರಾಯಣ ರಾವ್ ಉಡುಪಿ, ಕೆ. ಮನೋಹರ ಕಡೆಕಾರ್, ದಿನೇಶ್ ಉಪ್ಪೂರ ಅಂಬಾಗಿಲು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ದರು. ಕಾರ್ಯದರ್ಶಿ ಕೆ.ಜೆ.ಕೃಷ್ಣ ಪ್ರಶಸ್ತಿ ಪತ್ರ ವಾಚಿಸಿದರು. ಕೋಶಾಧಿಕಾರಿ ನಟರಾಜ ಉಪಾಧ್ಯ ವಂದಿಸಿದರು. ನಾರಾಯಣ ಎಂ.ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೆ ಮೊದಲು ಮಂಡಳಿಯ ಬಾಲ ಕಲಾವಿದರಿಂದ ಹೂವಿನ ಕೋಲು ಜರಗಿತು. ಬಳಿಕ ಮಂಡಳಿಯ ಸದಸ್ಯರಿಂದ ‘ವೀರವೃಷಸೇನ- ಕರ್ಣಾ ರ್ಜುನ’ ಯಕ್ಷಗಾನ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News