×
Ad

ಮಂಜೇಶ್ವರ : ಕುಸಿದು ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು

Update: 2018-02-12 21:05 IST

ಮಂಜೇಶ್ವರ, ಫೆ. 12: ಮಂಗಳೂರು ಶ್ರೀ ದೇವಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ, ಮಂಜೇಶ್ವರ ಕೋಳ್ಯೂರು ನಿವಾಸಿ ಜೋಯೆಲ್ (18) ಸೋಮವಾರ ಹಾಸ್ಟೆಲ್ ನಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

 ಹಾಸ್ಟೆಲ್ ನಲ್ಲಿ ಬ್ರಶ್ ಮಾಡಿ, ಮುಖ ತೊಳೆಯುತ್ತಿದ್ದ ವೇಳೆ  ಕುಸಿದು ಬಿದ್ದ ಜೋಯೆಲ್ ರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ರಸ್ತೆ ಮಧ್ಯೆ ಮೃತಪಟ್ಟರೆಂದು ತಿಳಿದು ಬಂದಿದೆ.

ಕಾಸರಗೋಡು ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಬ್ಲಾಕ್ ಪಂ. ಉಪಾಧ್ಯಕ್ಷೆ ಮಮತಾ ದಿವಾಕರ್, ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಸೋಮಪ್ಪ, ದಿವಾಕರ್ ಎಸ್.ಜೆ., ಪಿ.ಸೋಮಪ್ಪ ಹಾಗು ಇತರರು ಮೃತರ ಮನೆಗೆ ತೆರಳಿ ಅಂತಿಮ ದರ್ಶನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News