×
Ad

ಕಟಪಾಡಿ ಕೊಲೆ ಪ್ರಕರಣ: ಪೊಲೀಸ್ ತಂಡ ಹುಬ್ಬಳ್ಳಿಗೆ

Update: 2018-02-12 22:19 IST

ಕಾಪು, ಫೆ.12: ಕಟಪಾಡಿ ಸಮೀಪ ಅಚ್ಚಡ ಕ್ರಾಸ್‌ನ ವಿದ್ಯಾನಗರ ಎಂಬಲ್ಲಿ ಫೆ.10ರಂದು ರಾತ್ರಿ ನಡೆದ ಕೊಲೆಗೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಕೊಲೆಗೀಡಾದ ವ್ಯಕ್ತಿಯ ಮಾಹಿತಿಗಾಗಿ ಪೊಲೀಸ್ ತಂಡ ಹುಬ್ಬಳ್ಳಿಗೆ ತೆರಳಿದೆ.

ಇಂದು ಕೊಲೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಿಗಿ ಪರಿಶೀಲನೆ ನಡೆಸಿದ್ದಾರೆ. ನಾಲ್ಕೈದು ದಿನಗಳಿಂದ ಕಟಪಾಡಿ ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಮೃತ ವ್ಯಕ್ತಿ, ಹುಬ್ಬಳ್ಳಿಯ ನಿವಾಸಿ ಎಂಬ ಮಾಹಿತಿ ಪೊಲೀಸರಿಗೆ ದೊರೆತಿದೆ ಎನ್ನಲಾಗಿದೆ.

ಅದರಂತೆ ಪೊಲೀಸ್ ತಂಡವೊಂದು ಆತನ ಬಗ್ಗೆ ಮಾಹಿತಿಗಾಗಿ  ಹುಬ್ಬಳ್ಳಿಗೆ ತೆರಳಿದೆ ಎಂದು ತಿಳಿದುಬಂದಿದೆ. ದುಷ್ಕರ್ಮಿಗಳು ಯಾವುದೋ ವಿಚಾರದಲ್ಲಿ ಜಗಳ ಮಾಡಿ ಅಲ್ಲಿಯೇ ಇದ್ದ ಹಾರೆಯಿಂದ ಮೃತ ವ್ಯಕ್ತಿಯ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News