×
Ad

ಡಾ.ಹಾಫಿಝ್ ಅಝ್ಹರಿಗೆ ಮಾಸ್ಟರ್ ಡಿಪ್ಲೊಮಾ ಇನ್ ಅಕ್ಯುಪಂಚರ್ ನಲ್ಲಿ ದ್ವಿತೀಯ ರ್ಯಾಂಕ್

Update: 2018-02-12 22:25 IST

ಕಾಸರಗೋಡು, ಫೆ.12: ಕೇಂದ್ರ ಸರಕಾರದ ಪ್ಲಾನಿಂಗ್ ಕಮ್ಮಿಷನ್-ಭಾರತ್ ಸೇವಕ್ ಸಮಾಜದ ವತಿಯಿಂದ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಅಡೂರಿನ ಹೋಲಸ್ಟಿಕ್ ಹೆಲ್ತ್ ಸೆಂಟರ್, ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್‌ನೇಟಿವ್ ಮೆಡಿಸಿನ್ಸ್ ಸೆಂಟರ್‌ನಲ್ಲಿ ಏರ್ಪಡಿಸಿದ ಮಾಸ್ಟರ್ ಡಿಪ್ಲೊಮಾ ಇನ್ ಅಕ್ಯುಪಂಚರ್ ಫೈನಲ್ ಪರೀಕ್ಷೆಯಲ್ಲಿ ಕಾಸರಗೋಡಿನ ಡಾ. ಹಾಫಿಝ್ ಅಬ್ದುಲ್ ಮಜೀದ್ ಖಾಸಿಮಿ ಅಲ್-ಅಝ್ಹರಿ ದ್ವಿತೀಯ ರ್ಯಾಂಕ್ ಗಳಿಸಿ ಅಕ್ಯುಪಂಚರ್ ಥೆರಪಿ ಹಾಗೂ ಐಕ್ಯರಾಷ್ಟ್ರ ಸಭೆಯ ಅಂಗೀಕಾರವಿರುವ ಶ್ರೀಲಂಕಾದ ಕೊಲಂಬೊದ ಇಂಟರ್‌ನ್ಯಾಷನಲ್ ವಿವಿ ಪದವಿ ಪಡೆದಿದ್ದಾರೆ.

ವಿಶ್ವವಿಖ್ಯಾತ ಅರಬಿಕ್ ಯುನಿವರ್ಸಿಟಿಯಾದ ಈಜಿಪ್ತಿನ ಕೈರೋದ ಅಲ್ ಅಝ್ಹರ್‌ನಲ್ಲಿ ಅಝ್ಹರಿ ಬಿರುದು ಪಡೆದು ಕಲ್ಲಿಕೋಟೆ ವಿವಿಯಿಂದ ಅರಬಿಕ್ ಫಿಲೋಸಫಿಯಲ್ಲಿ ಢಾಕ್ಟರೇಟ್ ಪಡೆದಿರುವ ಡಾ. ಹಾಫಿಝ್ ಅಖಿಲ ಕರ್ನಾಟಕ ಹೆರಿಡಿಟರಿ ಡಾಕ್ಟರ್ಸ್‌ ಪರಿಷತ್ (ರಿ)ನ ಉಪಾಧ್ಯಕ್ಷ ಹಾಗೂ ಅಖಿಲ ಕೇರಳ ಆಯುರ್ವೇದ ಯೂನಾನಿ ಪಾರಂಪರ್ಯ ಫೆಡರೇಶನ್‌ನ ಕಾಸರಗೋಡು ಜಿಲ್ಲಾಧ್ಯಕ್ಷರಾಗಿದ್ದಾರೆ.

ಅಬುದಾಬಿ ಮಿನಿಷ್ಟ್ರಿ ಆಫ್ ಇಸ್ಲಾಮಿಕ್ ಅಫೇರ್ಸ್ ಪ್ರೀಚರ್ ಆಗಿಯೂ ಕರ್ನಾಟಕ ಹಾಗು ಕೇರಳದ ಹಲವು ಜಾಮಿಯಾ ಮಸೀದಿಗಳಲ್ಲಿ ಖತೀಬರಾಗಿ ಕಾರ್ಯನಿರ್ವಹಿಸಿದ್ದಾರೆ.

ದಿ ಗ್ರಾಂಡ್ ಫಿಲ್ಲರ್ಸ್ ಆಫ್ ಇಸ್ಲಾಂ (1989) ನನಸಾಗದ ಕನಸು, ಪುಲರಾತ್ತ ಸ್ವಪ್ನಂ ಮುಂತಾದ ಮಲಯಾಳ ಹಾಗು ಕನ್ನಡ ಭಾಷೆಗಳಲ್ಲಿ ಪುಸ್ತಕಗಳನ್ನು ರಚಿಸಿ ಬಹುಭಾಷಾ ವಿದ್ವಾಂಸರೆಂದು ಖ್ಯಾತಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News