×
Ad

ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ: ಶಾಸಕ ಲೋಬೊ

Update: 2018-02-12 22:33 IST

ಮಂಗಳೂರು, ಫೆ. 12: ಸುಮಾರು 130 ವರ್ಷಗಳಿಂದ ವಾಸ ಮಾಡಿಕೊಂಡಿರುವ ಜೆಪ್ಪು ಕಾಂಪೌಂಡ್ ನಿವಾಸಿಗಳಿಗೆ ಭೂ ಮಾಲಕತ್ವದ ಹಕ್ಕು ಸಹಿತ ನೀಡಿ ಇತರ ಬೇಡಿಕೆಗಳನ್ನು ಬೇಡಿಕೆಗಳನ್ನು ಈಡೇರಿಸಬೇಕೆಂದು ಜೆಪ್ಪು ಪ್ಯಾರಿಷನರ್ಸ್‌ ಅಸೋಸಿಯೇಶನ್ ವತಿಯಿಂದ ಜೆಪ್ಪು ಸೈಂಟ್ ಜೋಸೆಫ್‌ನಗರ ಕ್ಲಬ್‌ನಲ್ಲಿ ಸೋಮವಾರ ನಡೆದ ಸಭೆಯಲ್ಲಿ ನಿವಾಸಿಗಳು ಶಾಸಕ ಜೆ.ಆರ್. ಲೋಬೊ ಅವರನ್ನು ಒತ್ತಾಯಿಸಿ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ ಅವರು, ಜೆಪ್ಪು ಕಾಂಪೌಂಡ್ ನಿವಾಸಿಗಳಿಗೆ ಆಗಿರುವ ತೊದರೆ ಹಾಗೂ ಅವರು ಅನುಭವಿಸುತ್ತಿರುವ ನೋವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಯ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

ಬಿಷಪ್‌ರ ವಿರುದ್ಧ ನಿವಾಸಿಗಳ ಆರೋಪವನ್ನು ಆಲಿಸಿದ ಶಾಸಕರು, ವೇದಿಕೆಯೊಂದನ್ನು ಸಿದ್ಧಪಡಿಸಿ ಎರಡೂ ಕಡೆಯವರನ್ನು ಆಹ್ವಾನಿಸಿ ಮಾತುಕತೆ ನಡೆಸುತ್ತೇನೆ. ಯಾವುದೇ ಸಮಸ್ಯೆಗೆ ಪರಿಹಾರ ಇಲ್ಲ ಎಂಬುದಿಲ್ಲ. ನಾವೆಲ್ಲರೂ ಒಂದೆಡೆ ಸೇರಿ ಸಮಸ್ಯೆಯನ್ನು ಗುರುತಿಸಿಕೊಂಡು ಅದಕ್ಕೆ ಪರಿಹಾರವನ್ನು ಹುಡುಕೋಣ ಎಂದರು. ಬಿಷಪ್‌ರ ಗುಟ್ಟನ್ನು ಬಯಲಿಗೆಳೆದ ಇಬ್ಬರು ಆರ್‌ಟಿಐ ಕಾರ್ಯಕರ್ತರಾದ ವಲೇರಿಯನ್ ಟೆಕ್ಸೇರಾ ಮತ್ತು ವಿಕ್ಟರ್ ಪಾಯ್ಸೆರವರ ವಿರುದ್ಧ ಬಿಷಪರು ಕಳುಹಿಸಿರುವ ‘ಕ್ವಿಟ್ ನೋಟಿಸ್’ ಕೂಡಲೇ ಹಿಂಪಡೆಯಬೇಕು. ಜೆಪ್ಪು ಕಾಂಪೌಂಡ್ ಮೇಲೆ ಬಿಷಪರು ನಡೆಸುವ ಭೂ ಮಾಲಿಕತ್ವವನ್ನು ನಿಲ್ಲಿಸಿ, ನಿವಾಸಿಗಳಿಗೇ ಜಾಗಗಳ ಮೇಲಿನ ನ್ಯಾಯಯುತ ಅಧಿಕಾರ ನೀಡಲು ಸಹಕರಿಸಬೇಕು. ಕಾಂಪೌಂಡ್‌ನಲ್ಲಿ ಜಾಗವನ್ನು ಖರೀದಿಸಿ ಮೋಸ ಕ್ಕೊಳಗಾಗಿರುವ ಹೊಸ ನಿವಾಸಿಗಳನ್ನೂ ಮೂಲ ನಿವಾಸಿಗಳಂತೆ ಪರಿಗಣಿಸಿ ಅವರಿಗೂ ನ್ಯಾಯಯುತ ಹಕ್ಕು ದೊರಕುವಂತೆ ಮಾಡಬೇಕು. ಇನ್ನು ಮುಂದೆ ಜೆಪ್ಪು ಕಾಂಪೌಂಡ್‌ನ ಯಾವುದೇ ಆಸ್ತಿ, ಜಾಗ ಮಾರುವುದಾಗಲಿ, ಲೀಝ್ ಅಥವಾ ಬಾಡಿಗೆಗೆ ಕೊಡುವುದಾಗಲಿ ಅಥವಾ ಯಾವುದೇ ಅಭಿವೃದ್ಧಿಯ ಕೆಲಸಗಳನ್ನು ಕೈಗೊಳ್ಳುವಾಗ ಇಲ್ಲಿನ ನಿವಾಸಿಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. ನಿವಾಸಿಗಳು ಅನುಭವಿಸಿರುವ ನೋವು, ಕಷ್ಟ, ನಷ್ಟ ಹಾಗೂ ನಿಂದನೆ, ಶೋಷಣೆಗಳಿಗೆ ಪರಿಹಾರ ನೀಡಬೇಕು ಎಂದು ನಿವಾಸಿಗಳು ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಶಾಸಕರಿಗೆ ಸಲ್ಲಿಸಲಾಯಿತು.

ಜೆಪ್ಪು ಪ್ಯಾರಿಷನರ್ಸ್‌ ಅಸೋಸಿಯೇಶನ್ ಅಸೋಸಿಯೇಶನ್‌ನ ಅಧ್ಯಕ್ಷ ವಿಲ್ಸನ್ ಬ್ಯಾಪ್ಟಿಸ್ಟ್, ಸಲಹೆಗಾರ ಎರಿಕ್ ಒಝಾರಿಯೊ, ಸತೀಶ್ ಫೊನ್ಸೆಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವಾಸಿಗಳಾದ ಫಿಲೋಮಿನಾ ಸಿಕ್ವೇರಾ, ಮಾಯ್ಟಿ ಗಿಬ್ಸನ್, ವಿನೆಟ್ ಲತಾ, ಗ್ಲಾಡಿಸ್ ಫೊನ್ಸೆಕಾ, ಕ್ಲೀಟಾ ನೊರೊನ್ಹಾ ಅವರು ನಿವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು. ವಿಲ್ಸನ್ ಬ್ಯಾಪ್ಟಿಸ್ಟ್ ಸ್ವಾಗತಿಸಿದರು. ಎರಿಕ್ ಒಝಾರಿಯೊ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News