×
Ad

ವಾಮಂಜೂರು: ಕರಾವಳಿ ಫಾರ್ಮಸಿ ಕಾಲೇಜ್‌ಗೆ ರ್ಯಾಂಕ್‌ಗಳು

Update: 2018-02-12 23:27 IST
ಪರ್ವೀನ್, ಬೆಂಜುನ್, ರೋಡ್ರಿಗಸ್, ಮರಿಯ 

ಮಂಗಳೂರು, ಫೆ. 12: ನಗರದ ವಾಮಂಜೂರಿನಲ್ಲಿರುವ ಪ್ರತಿಷ್ಠಿತ ಕರಾವಳಿ ಫಾರ್ಮಸಿ ಕಾಲೇಜಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾನಿಲಯವು ಜೂ. 2017ನೇ ಸಾಲಿನಲ್ಲಿ ನಡೆಸಿದ ಅಂತಿಮ ಬಿ.ಫಾರ್ಮಾ ಪದವಿ ಹಾಗೂ ಫಾರ್ಮಾ.ಡಿ ಪದವಿ ಪರೀಕ್ಷೆಯಲ್ಲಿ ಹಲವು ರ್ಯಾಂಕ್‌ಗಳು ಲಭಿಸಿ ಅದ್ವಿತೀಯ ಸಾಧನೆ ಮಾಡಿದೆ. 

ಬಿ.ಫಾರ್ಮಾ ವಿಭಾಗದಲ್ಲಿ ಡೀನ್ ರೋಡ್ರಿಗಸ್ - ಬಿ.ಫಾರ್ಮಾ ಪ್ರಥಮ ವರ್ಷದಲ್ಲಿ 4ನೆ ರ್ಯಾಂಕ್ ಹಾಗೂ ಒಟ್ಟು ನಾಲ್ಕು ವರ್ಷದ ಬಿ.ಫಾರ್ಮಾ ಪದವಿಯಲ್ಲಿ 8ನೆ ರ್ಯಾಂಕ್ ಮತ್ತು ಅದಿಬ ಪರ್ವೀನ್- ಬಿ.ಫಾರ್ಮಾ ದ್ವಿತೀಯ ವರ್ಷದಲ್ಲಿ 9ನೆ ರ್ಯಾಂಕ್ ಪಡೆದಿರುತ್ತಾರೆ.

ಫಾರ್ವ ಡಿ ವಿಭಾಗದಲ್ಲಿ ಬಿನ್ಸಿ ಬೆಂಜುನ್ - ಫಾರ್ವ ಡಿ. ಪ್ರಥಮ ವರ್ಷದಲ್ಲಿ 4ನೆ ಹಾಗೂ ಒಟ್ಟು ಆರು ವರ್ಷದ ಫಾರ್ವ ಡಿ ಪದವಿಯಲ್ಲಿ 7ನೆ ರ್ಯಾಂಕ್ ಮತ್ತು ಸೆರಿನ ಮರಿಯ - ಫಾರ್ಮ.ಡಿ ತೃತೀಯ ವರ್ಷದಲ್ಲಿ 5ನೆ ರ್ಯಾಂಕ್ ಪಡೆದಿರುತ್ತಾರೆ. ಅಲ್ಲದೆ ಇತರ ವಿದ್ಯಾರ್ಥಿಗಳು ವಿವಿಧ ವೈಯಕ್ತಿಕ ವಿಷಯಗಳಲ್ಲಿ ರ್ಯಾಂಕ್ ಗಳಿಸುವುದರ ಮೂಲಕ ಮೇಲುಗೈ ಸಾಧಿಸಿದ್ದಾರೆ.

ಯುವ ಮುತ್ಸದ್ದಿ, ಶಿಕ್ಷಣ ತಜ್ಞ, ಎಸ್. ಗಣೇಶ್ ರಾವ್ ಅವರಿಂದ 1996ರಲ್ಲಿ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದ ಪ್ರಥಮ ಡಿಸೈನಿಂಗ್ ಕಾಲೇಜು ಎಂಬ ಹೆಗ್ಗಳಿಕೆಯೊಂದಿಗೆ ಪ್ರಾರಂಭಗೊಂಡ ಮಂಗಳೂರಿನ ಕರಾವಳಿ ಕಾಲೇಜುಗಳ ಸಮೂಹ ಸಂಸ್ಥೆಯು ಪ್ರಸ್ತುತ ತನ್ನ ಶಿಸ್ತು ಬದ್ಧ ವೈಶಿಷ್ಟ ಪೂರ್ಣ ಮತ್ತು ಧನಾತ್ಮಕ ಸಾಧನೆಗಳಿಂದ ಭಾರತದ ಪ್ರತಿಷ್ಠಿತ ಕಾಲೇಜುಗಳಲ್ಲೊಂದಾಗಿ ಗುರುತಿಸಿಕೊಂಡಿದೆ. ಅಲ್ಲದೆ ಕರಾವಳಿ ಕಾಲೇಜ್ ಆಫ್ ಫಾರ್ಮಸಿ ಫಾರ್ಮ ಡಿ ಕೋರ್ಸನ್ನು ಮಂಗಳೂರಿನಲ್ಲಿ ಪ್ರಾರಂಭಿಸಿದ ಮೊದಲನೇ ಕಾಲೇಜು ಎಂಬ ಕೀರ್ತಿಯನ್ನು ಗಳಿಸಿದೆ.ಕರಾವಳಿ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಳಪಟ್ಟ ಬಿ.ಎಸ್ಸಿ ಇಂಟೀರಿಯರ್ ಡಿಸೈನ್, ಬಿ.ಎಸ್ಸಿ. ಫ್ಯಾಶನ್ ಡಿಸೈನ್, ಬಿ.ಸಿ.ಎ, ಬಿ.ಬಿ.ಎ, ಬಿ.ಕಾಂ ವಿದ್ ಏವಿಯೇಶನ್, ಬ್ಯಾಚುಲರ್ ಇನ್ ಹೊಟೇಲ್ ಮ್ಯಾನೇಜ್‌ಮೆಂಟ್ (ಬಿ.ಎಚ್.ಎಂ), ಬಿ.ಎಸ್ಸಿ.(ಎಚ್.ಎಸ್.) ಮತ್ತು ಬಿ.ಎಡ್ ಪದವಿ ಮತ್ತು ಬೆಂಗಳೂರಿನ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಬಿ.ಎಸ್ಸಿ ನರ್ಸಿಂಗ್, ಎಂ.ಎಸ್ಸಿ. ನರ್ಸ್ಸಿಂಗ್, ಪೋಸ್ಟ್ ಬಿ.ಎಸ್ಸಿ, ನರ್ಸಿಂಗ್, ಬಿ.ಪಿ.ಟಿ (ಫಿಜಿಯೋತೆರಫಿ) ಬಿ.ಫಾರ್ಮ, ಎಮ್. ಫಾರ್ಮ, ಫಾರ್ವ ಡಿ, ಪೋಸ್ಟ್ ಬಾಕ್ಯುಲರೇಟ್ ಫಾರ್ಮ ಡಿ, ಬಿ.ಎ.ಎಮ್.ಎಸ್. ಪದವಿಗಳನ್ನು ಹಾಗೂ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ, ಎಮ್-ಟೆಕ್ ಕನ್‌ಸ್ಟ್ರಕ್ಷನ್ ಟೆಕ್ನಾಲಜಿ, ಎಮ್-ಟೆಕ್ ಇಂಡಸ್ಟ್ರಿಯಲ್ ಆಟೋಮೆಷನ್ ಎಂಡ್ ರೋಬೋಟಿಕ್ಸ್, ಎಮ್-ಟೆಕ್ ಡಿಜಿಟಲ್ ಎಲೆಕ್ಟ್ರಾನಿಕ್ಸ್, ಎಮ್-ಟೆಕ್ ಮೆನ್ ಡಿಸೈನ್ ಎಂ.ಬಿ.ಎ, ಬಿ.ಇ. ಏರೋನಾಟಿಕಲ್, ಬಿ.ಇ. ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಬಿ.ಇ. ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್, ಬಿ.ಇ. ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್, ಬಿ.ಇ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ಬಿ.ಇ. ಸಿವಿಲ್ ಎಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಡಿಪ್ಲೊಮಾ ಇನ್ ಏರೋನಾಟಿಕಲ್, ಪಾಲಿಟೆಕ್ನಿಕ್ ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್, ಪಾಲಿಟೆಕ್ನಿಕ್ ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್, ಪಾಲಿಟೆಕ್ನಿಕ್ ಡಿಪ್ಲೊಮಾ ಇನ್ ಮೆಕ್ಯಾನಿಕಲ್, ಪಾಲಿಟೆಕ್ನಿಕ್ ಡಿಪ್ಲೊಮಾ ಇನ್ ಸಿವಿಲ್, ಪಾಲಿಟೆಕ್ನಿಕ್ ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಮತ್ತು ಪಾಲಿಟೆಕ್ನಿಕ್ ಡಿಪ್ಲೊಮಾ ಇನ್ ಆಟೋಮೊಬೈಲ್ ಕೋರ್ಸ್‌ಗಳನ್ನು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News