ಸಂಸ್ಕೃತ ಸೌರಭ: ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿಗೆ ಸಮಗ್ರ ಪ್ರಶಸ್ತಿ

Update: 2018-02-13 13:10 GMT

ಉಡುಪಿ, ಫೆ.13: ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದ ಆಶ್ರಯದಲ್ಲಿ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ಸಂಸ್ಕೃತ ಸ್ಪರ್ಧೆ ಸಂಸ್ಕೃತ ಸೌರಭದಲ್ಲ್ಲಿ ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಸಮಗ್ರ ಪ್ರಶಸ್ತಿ ಮತ್ತು ಕುಂದಾಪುರದ ಭಂಡಾರ್ಕಾರ್ಸ್‌ ಕಾಲೇಜು ದ್ವಿತೀಯ ಸ್ಥಾನವನ್ನು ಗೆದ್ದುಕೊಂಡವು.

ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯತೀರ್ಥ ಸ್ವಾಮೀಜಿ ವಿಜೇತರಿಗೆ ಬಹುಮಾನ ವಿತರಿಸಿದರು. ಕಾಲೇಜಿನ ಗೌರವ ಕೋಶಾಧಿಕಾರಿ ಪ್ರದೀಪ್ ಕುಮಾರ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಅಮೃತೇಶ್ ಡಿ.ಎಸ್. ನಿರ್ಣಾಯಕರಾಗಿದ್ದರು. ತೃಷಾ ಕಾಲೇಜಿನ ಪ್ರಾಧ್ಯಾ ಪಕ ಐ.ಡಿ.ಸುಧಾಕರ್ ವಿಜೇತರ ಪಟ್ಟಿ ವಾಚಿಸಿದರು. ಸಂಸ್ಕೃತ ವಿಭಾಗದ ಡಾ.ಆನಂದ ಆಚಾರ್ಯ ಸ್ವಾಗತಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ರಮೇಶ್ ಟಿ.ಎಸ್. ವಂದಿಸಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶಗಳ ವಿವರ: ರಸಪ್ರಶ್ನೆ: ಪ್ರ- ಉಡುಪಿ ಎಂ.ಜಿ.ಎಂ ಕಾಲೇಜು, ದ್ವಿ- ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಮತ್ತು ಭಂಡಾರ್ಕಾರ್ಸ್ ಕಾಲೇಜು. ಸಂಸ್ಕೃತ ಭಾಷಣ: ಪ್ರ- ಉಜಿರೆ ಎಸ್.ಡಿ.ಎಂ., ದ್ವಿ- ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು.

ಸಮೂಹ ಗೀತಗಾನ: ಉಜಿರೆ ಎಸ್.ಡಿ.ಎಂ., ದ್ವಿ-ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು. ನೃತ್ಯ: ಪ್ರ-ಉಡುಪಿ ಯು.ಪಿ.ಎಂ.ಸಿ., ದ್ವಿ- ಉಡುಪಿ ಅಜ್ಜರಕಾಡು ಸರಕಾರಿ ಮಹಿಳಾ ಕಾಲೇಜು. ಸಂಸ್ಕೃತ ಪ್ರಹಸನ: ಪ್ರ- ಉಜಿರೆ ಎಸ್.ಡಿ.ಎಂ., ದ್ವಿ-ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು. ಏಕಪಾತ್ರಾಭಿನಯ: ಪ್ರ- ಭಂಡಾರ್‌ಕಾರ್ಸ್ ಕಾಲೇಜು, ದ್ವಿ- ಅಜ್ಜರಕಾಡು ಸರಕಾರಿ ಮಹಿಳಾ ಕಾಲೇಜು. ಕಾರ್ಯಕ್ರಮ ನಿರ್ವಹಣೆ: ಪ್ರ- ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ದ್ವಿ- ಉಜಿರೆ ಎಸ್.ಡಿ.ಎಂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News