ಭಾರತ, ಪಾಕ್ ಆಟಗಾರರು ಒಂದು ತಂಡದಲ್ಲಿ ಶ್ರೀಲಂಕಾ ವಿರುದ್ಧ ಆಡಿದ್ದು ನಿಮಗೆ ಗೊತ್ತೇ?

Update: 2018-02-13 13:55 GMT

ಹೊಸದಿಲ್ಲಿ, ಫೆ.13: ಭದ್ರತೆಯ ಕಾರಣದಿಂದಾಗಿ ಆಸ್ಟ್ರೇಲಿಯ ಮತ್ತು ವೆಸ್ಟ್‌ಇಂಡೀಸ್ ತಂಡಗಳು ಶ್ರೀಲಂಕಾದಲ್ಲಿ 1996ರ ಲೀಗ್ ಹಂತದ ಪಂದ್ಯಗಳಲ್ಲಿ ಆಡಲು ಹಿಂದೇಟು ಹಾಕಿತ್ತು.

ಶ್ರೀಲಂಕಾದ ಪ್ರೇಮ್‌ದಾಸ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯ ತಂಡ ವಿಶ್ವಕಪ್‌ನ ಗ್ರೂಪ್ ಹಂತದ ಪಂದ್ಯಗಳಲ್ಲಿ ಆಸಕ್ತಿ ವಹಿಸಲಿಲ್ಲ. ಶ್ರೀಲಂಕಾ ತಂಡ ಆ ದಿನಗಳಲ್ಲಿ ಅಷ್ಟೇನೂ ಬಲಿಷ್ಠ ತಂಡವಾಗಿರಲಿಲ್ಲ. ಶ್ರೀಲಂಕಾದ ನೆಲದಲ್ಲಿ ಆಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ವಿಶ್ವದ ಬಲಿಷ್ಠ ತಂಡಗಳಿಗೆ ಶ್ರೀಲಂಕಾ ತೋರಿಸಬೇಕಿತ್ತು. ಭಾರತ ಮತ್ತು ಪಾಕಿಸ್ತಾನ ತಂಡಗಳು ಕ್ರಿಕೆಟ್ ಆಡುವುದಕ್ಕೆ ಆಸಕ್ತಿ ವಹಿಸಿತು.

 ಭಾರತ ಮತ್ತು ಪಾಕಿಸ್ತಾನ ತಂಡ 1989-90ರ ಬಳಿಕ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಆಡಿರಲಿಲ್ಲ. ಈ ಟೂರ್ನಮೆಂಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಆಡಲು ಒಪ್ಪಿಕೊಂಡಿತು. ಫೆ.13ರಂದು ಉಭಯ ತಂಡಗಳ ಆಟಗಾರರು ಜೊತೆಯಾಗಿ ಕಣಕ್ಕಿಳಿದರು. ಸಚಿನ್ ತೆಂಡುಲ್ಕರ್, ವಸೀಮ್ ಅಕ್ರಮ್, ಮುಹಮ್ಮದ್ ಅಝರುದ್ದೀನ್ , ಸಯೀದ್ ಅನ್ವರ್, ಅನಿಲ್ ಕುಂಬ್ಳೆ, ಮತ್ತು ವಕಾರ ಯೂನಿಸ್ ಒಂದೇ ತಂಡದಲ್ಲಿ ಅಝರ್ ತಂಡದ ನಾಯಕರಾಗಿದ್ದರು.

 ಶ್ರೀಲಂಕಾ ತಂಡ 40 ಓವರ್‌ಗಳಲ್ಲಿ 168 ರನ್‌ಗಳಿಗೆ ಆಲೌಟಾಗಿತ್ತು.ಗುರುಸಿಂಹ 34 ರನ್, ಅರ್ಜುನ ರಣತುಂಗ 32; ಆಶೀಶ್ ಕಪೂರ್ 34ಕ್ಕೆ 2 ಮತ್ತು ಅನಿಲ್ ಕುಂಬ್ಳೆ 12ಕ್ಕೆ 2 ವಿಕೆಟ್ ಕಬಳಿಸಿದರು. ವಿಲ್ಸ್ ಇಂಡಿಯಾ ಮತ್ತು ಪಾಕಿಸ್ತಾನ ಇಲೆವೆನ್ ತಂಡದ ದಾಳಿಗೆ ಸಿಲುಕಿದ ಶ್ರೀಲಂಕಾ ತಂಡಕ್ಕೆ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. 34.3 ಓವರ್‌ಗಲ್ಲ್ಲಿ ವಿಲ್ಸ್ ಇಂಡಿಯಾ ಮತ್ತು ಪಾಕಿಸ್ತಾನ ಇಲೆವೆನ್ 6 ವಿಕೆಟ್ ನಷ್ಟದಲ್ಲಿ 171 ರನ್ ಗಳಿಸಿ ಗೆಲುವಿನ ನಗೆ ಬೀರಿತು.

 ಸಚಿನ್ ತೆಂಡುಲ್ಕರ್ 36 ರನ್, ಮುಹಮ್ಮದ್ ಅಝರುದ್ದೀನ್ 32; ಮುತ್ತಯ್ಯ ಮುರಳೀಧರನ್ 46ಕ್ಕೆ 2 , ಉಪುಲ್ ತರಂಗ 35ಕ್ಕೆ 2 ವಿಕೆಟ್ ಪಡೆದರು. ಅನಿಲ್ ಕುಂಬ್ಳೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News