×
Ad

ಸಿಎ ಅಬ್ದುಲ್ಲ ಮಾದುಮೂಲೆ ಅವರಿಗೆ ಸನ್ಮಾನ

Update: 2018-02-13 20:07 IST

ಪೆರ್ಲ, ಫೆ.13: ಅಡ್ಕಸ್ಥಳ ಜಮಾಅತ್‌ಗೊಳಪಟ್ಟ ಮಸೀದಿ ಮತ್ತು ಮದ್ರಸದ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿರುವ ಜಮಾಅತ್ ಅಧ್ಯಕ್ಷ ಸಿ.ಎ ಅಬ್ದುಲ್ಲ ಮಾದುಮೂಲೆ ಅವರನ್ನು ಅಡ್ಕಸ್ಥಳ ಬದ್ರಿಯಾ ನಗರದಲ್ಲಿ ನಡೆದ ಮಶ್ಹೂರ್ ವಲಿಯುಲ್ಲಾಹಿ ದರ್ಗಾ ಶರೀಫ್‌ನ ಉರೂಸ್‌ನ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಸಿಂಸಾರುಲ್ ಹಖ್ ಹುದವಿ ಅಬುದಾಬಿ ಅವರು ಅಬ್ದುಲ್ಲ ಮಾದುಮೂಲೆ ಅವರನ್ನು ಟಿಐವೈಸಿ ಜಿಸಿಸಿ ಸಮಿತಿಯ ಪರವಾಗಿ ಸನ್ಮಾನಿಸಿದರು. ಅಡ್ಕಸ್ಥಳ ಮುದರ್ರಿಸ್ ಅಬ್ದುಲ್ ರಝಾಕ್ ಮಿಸ್ಬಾಹಿ ಬಾಯಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಅಡ್ಕಸ್ಥಳ ಜಮಾಅತ್ ಗೌರವಾಧ್ಯಕ್ಷ ಮೀರ್ ಝಾಹೀದ್ ತಂಙಳ್ ಮಂಜೇಶ್ವರ, ಎಪಿ ಅಬ್ದುಲ್ ಹಮೀದ್ ಫೈಝಿ, ಮುಹಮ್ಮದ್ ಶಾಫಿ ಅನ್ವರಿ ಚೆರ್ಪುಳಶ್ಶೇರಿ, ಅಬೂಬಕರ್ ಸಿದ್ದೀಕ್ ಅಹ್ಮದ್ ಅಲ್ ಜಲಾಲಿ ಕೂರ್ನಡ್ಕ , ಶಮೀರ್ ಸಖಾಫಿ, ಜಿಸಿಸಿ ಸಮಿತಿಯ ಆರ್‌ಎಂ ಅಶ್ರಫ್, ಜಮಾಅತ್ ಕೋಶಾಧಿಕಾರಿ ಆರ್‌ಎಂ ಸತ್ತಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News