ಗಂಟಲಲ್ಲಿ ಆಹಾರ ಸಿಲುಕಿ ಒಂದುವರೆ ವರ್ಷದ ಮಗು ಮೃತ್ಯು
Update: 2018-02-13 20:50 IST
ಪುತ್ತೂರು, ಫೆ. 13: ಗಂಟಲಲ್ಲಿ ಆಹಾರ ಸಿಲುಕಿ ಪುತ್ತೂರಿನ ಒಂದುವರೆ ವರ್ಷದ ಮಗುವೊಂದು ಚಿಕ್ಕಮಗಳೂರಿನಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ.
ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಸ್ವರ್ಗ- ಸೂರಂಬೈಲು ನಿವಾಸಿ ದುರ್ಗಾಪ್ರಸಾದ್ ಎಂಬವರ ಪುತ್ರ ಧ್ರುವ ಮೃತಪಟ್ಟ ಮಗು.
ಚಿಕ್ಕಮಗಳೂರಿನ ಅಜ್ಜಿ ಮನೆಯಲ್ಲಿ ಕಾಫಿ- ತಿಂಡಿ ತಿನ್ನುತ್ತಿದ್ದ ವೇಳೆ ಗಂಟಲಲ್ಲಿ ಆಹಾರ ಸಿಲುಕಿ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಕಳೆದ 20 ವರ್ಷಗಳಿಂದ ಪುತ್ತೂರಿನಲ್ಲಿ ವಯೋಲಿನ್ ತರಬೇತಿ ನೀಡುತ್ತಿದ್ದ ವಿದ್ವಾನ್ ಪದ್ಮನಾಭ ಆಚಾರ್ಯರ ಮೊಮ್ಮಗ ಧ್ರುವ. ರವಿವಾರ ಚಿಕ್ಕಮಗಳೂರಿನಲ್ಲಿ ತನ್ನ ಅಜ್ಜಿ (ತಾಯಿಯ ತಾಯಿ) ಮನೆಗೆ ತೆರಳಿದ್ದರು. ಮಂಗಳವಾರ ಕಾಫಿ- ತಿಂಡಿ ತಿನ್ನುವ ವೇಳೆ ಈ ಅವಘಡ ಸಂಭವಿಸಿದೆ. ತಕ್ಷಣ ಚಿಕ್ಕಮಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಶ್ವಾಸಕೋಶದಲ್ಲಿ ಆಹಾರ ಸಿಕ್ಕಿಕೊಂಡ ಕಾರಣ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.