×
Ad

ಟ್ಯಾಪ್ಮಿಯಲ್ಲಿ ಮಾರುಕಟ್ಟೆ ಮೇಳ ‘ಎಂ-ಪವರ್’

Update: 2018-02-13 22:00 IST

ಮಣಿಪಾಲ, ಫೆ.13: ಮಣಿಪಾಲದ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ(ಟ್ಯಾಪ್ಮಿ) ಎರಡು ದಿನಗಳ ವಾರ್ಷಿಕ ಮಾರುಕಟ್ಟೆ ಮೇಳ ‘ಎಂ-ಪವರ್’ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಇತ್ತೀಚೆಗೆ ನಡೆಯಿತು.

ಟ್ಯಾಪ್ಮಿ ಸಂಸ್ಥೆಯ ಮಾರುಕಟ್ಟೆ ವೇದಿಕೆ ಆಯೋಜಿಸಿದ್ದ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಪ್ರದರ್ಶಿಸಲು ಹಾಗೂ ಹಿರಿಯ ಉದ್ಯಮ ವೃತ್ತಿಪರರೊಂದಿಗೆ ಜಾಲವನ್ನು ಸೃಷ್ಟಿಸಿಕೊಳ್ಳಲು ಸ್ಪರ್ಧಾತ್ಮಕ ವೇದಿಕೆಯಾಗಿತ್ತು.

ಎರಡನೇ ವರ್ಷದ ‘ಎಂ-ಪವರ್’ ಮಾರುಕಟ್ಟೆ ಮೇಳದಲ್ಲಿ ಚರ್ಚೆ ಮತ್ತು ವಿಚಾರಗಳ ವಿನಿಮಯಕ್ಕಾಗಿ ಉದ್ಯಮಗಳ ಪ್ರಮುಖರನ್ನು ಆಹ್ವಾನಿಸಲಾಗಿತ್ತು. ಮಾರುಕಟ್ಟೆ ಮೇಳದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಟ್ಯಾಪ್ಮಿಯ ನಿರ್ದೇಶಕ ಡಾ.ಮಧು ವೀರರಾಘವನ್ ಮಾತನಾಡಿ, ಸ್ಥಳೀಯ ಸಮುದಾಯ ದೊಂದಿಗೆ ಸೇರಿ ಆಯೋಜಿಸಿದ ಈ ಮೇಳದ ಅಗತ್ಯತೆಯನ್ನು ವಿವರಿಸಿದರು. ಬಿ. ಸ್ಕೂಲ್ ಯಶಸ್ವಿಯಾಗಲು ಆ ಸಂಸ್ಥೆ ಸ್ಥಳೀಯವಾಗಿ, ರಾಷ್ಟ್ರೀಯವಾಗಿ ಮತ್ತು ಜಾಗತಿಕವಾಗಿ ಕೆಲಸಮಾಡಬೇಕು ಎಂದರು.

ಮಾರುಕಟ್ಟೆ ಪ್ರದೇಶದ ಮುಖ್ಯಸ್ಥ ಪ್ರೊ. ಗುರುರಾಜ್ ಕಿದಿಯೂರ್ ಮಾತನಾಡಿ, ಮಾರುಕಟ್ಟೆ ಮತ್ತು ನವೀನತೆ ಜೊತೆಜೊತೆಯಾಗಿಯೇ ಸಾಗುತ್ತಿವೆ. ಸ್ಥಳೀಯ ಉದ್ಯಮಶೀಲರು ತಮ್ಮ ಆತಂಕ ಮತ್ತು ಕಾಳಜಿಗಳನ್ನು ಹಂಚಿಕೊಂಡು ಕೈಗಾರಿಕೆಯ ಪ್ರಮುಖರಿಂದ ನೂತನ ಚಿಂತನೆಗಳನ್ನು ಪಡೆದುಕೊಂಡಿರುವುದು ಖುಷಿಯ ವಿಷಯ ಎಂದರು.

 ಮಾರುಕಟ್ಟೆ ಪ್ರದೇಶದ ಮುಖ್ಯಸ್ಥ ಪ್ರೊ. ಗುರುರಾಜ್ ಕಿದಿಯೂರ್ ಮಾತನಾಡಿ, ಮಾರುಕಟ್ಟೆ ಮತ್ತು ನವೀನತೆ ಜೊತೆಜೊತೆಯಾಗಿಯೇ ಸಾಗುತ್ತಿವೆ. ಸ್ಥಳೀಯ ಉದ್ಯಮಶೀಲರು ತಮ್ಮ ಆತಂಕ ಮತ್ತು ಕಾಳಜಿಗಳನ್ನು ಹಂಚಿಕೊಂಡು ಕೈಗಾರಿಕೆಯ ಪ್ರಮುಖರಿಂದ ನೂತನ ಚಿಂತನೆಗಳನ್ನು ಪಡೆದು ಕೊಂಡಿರುವುದು ಖುಷಿಯ ವಿಷಯ ಎಂದರು. ಎಂ-ಪವರ್‌ನಲ್ಲಿವಿದ್ಯಾರ್ಥಿಗಳಿಗೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಉದ್ದಿಮೆಗಳ ಪ್ರಮುಖರೊಂದಿಗೆ ಚರ್ಚೆಗಳಲ್ಲೂ ಅವರು ಸಕ್ರೀಯರಾಗಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News