‘ಬೊಂಡಾಲ ಪ್ರಶಸ್ತಿ 2018’ ಪ್ರದಾನ
Update: 2018-02-13 22:15 IST
ಮಂಗಳೂರು, ಫೆ.13: ಕಟೀಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯು ಶಂಭೂರು ಗ್ರಾಮದ ಬೊಂಡಾಲದಲ್ಲಿ ಫೆ.15ರ ರಾತ್ರಿ 9:30ಕ್ಕೆ ‘ಯುಗ ದರ್ಶನ’ ಹಾಗೂ ಫೆ.16ರ ರಾತ್ರಿ 9:30ಕ್ಕೆ ‘ಶ್ರೀದೇವಿ ಮಹಾತ್ಮೆ’ ಪುಣ್ಯಕಥಾಭಾಗವನ್ನು ಆಡಿ ತೋರಿಸಲಿರುವರು.
ರಾತ್ರಿ 10:30ಕ್ಕೆ ‘ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿ ಸಂಸ್ಮರಣೆ ಹಾಗೂ ಬೊಂಡಾಲ ಪ್ರಶಸಿಯನ್ನು ಯಕ್ಷಗಾನ ಕಲಾವಿದ ಸುಬ್ರಾಯ ಹೊಳ್ಳ ಕಾಸರಗೋಡು ಮತ್ತು ಬೆಳ್ಳಾರೆ ವಿಶ್ವನಾಥ ರೈಯವರಿಗೆ ನೀಡಿ ಗೌರವಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಭಾಧ್ಯಕ್ಷತೆ ವಹಿಸುವರು. ಕಟೀಲು ಅನುವಂಶಿಕ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಮತ್ತು ಹರಿನಾರಾಯಣ ಅಸ್ರಣ್ಣ ಆಶೀರ್ವಚನ ನೀಡುವರು ಎಂದು ಪ್ರಕಟನೆ ತಿಳಿಸಿದೆ.