ಫೆ. 15: ಸಂತ ಅಂತೋನಿಯ ಪುಣ್ಯ ಸ್ಮರಣಿಕೆಗಳ ಹಬ್ಬ
ಮಂಗಳೂರು, ಫೆ.13: ಸಂತ ಅಂತೋನಿಯ ಪುಣ್ಯ ಸ್ಮರಣಿಕೆಗಳ ಗೌರಾವಾರ್ಥ ಸಂಭ್ರಮದ ಬಲಿಪೂಜೆಯು ಫೆ.15ರಂದು ಸಂಜೆ 6ಕ್ಕೆ ಮಿಲಾಗ್ರಿಸ್ ಚರ್ಚ್ ಮೈದಾನದಲ್ಲಿ ನಡೆಯಲಿದ್ದು, ಮಂಗಳೂರು ಬಿಷಪ್ ಡಾ. ಎಲೋಶಿಯಸ್ ಪಾವ್ಲ್ ಡಿಸೋಜ ಕಾರ್ಯಕ್ರಮ ನೆರವೇರಿಸುವರು.
ಬೆಳಗ್ಗೆ 8:15ಕ್ಕೆ ಮಿಲಾಗ್ರಿಸ್ ಚರ್ಚ್‌ನಲ್ಲಿ ಡಾ.ಪಿಯುಸ್ ಡಿಸೋಜ (ಒಸಿಡಿ) ವ್ಯಾಧಿಸ್ತರಿಗೆ ಮತ್ತು ಹಿರಿಯರಿಗಾಗಿ ಬಲಿಪೂಜೆ ಅರ್ಪಿಸುವರು. ಸಂಜೆ 4:30ಕ್ಕೆ ಕಲ್ಲಿಕೋಟೆ ಧರ್ಮಪ್ರಾಂತದ ಧರ್ಮಾಧ್ಯಕ್ಷ ವರ್ಗೀಸ್ ಚಕ್ಕಲಕಲ್ ಮಲಯಳಂ ಭಾಷೆಯಲ್ಲಿ ಬಲಿಪೂಜೆ ಅರ್ಪಿಸುವರು. ಪೂರ್ವಾಹ್ನ 11ಕ್ಕೆ ಜೆಪ್ಪುಸಂತ ಅಂತೋನಿ ಆಶ್ರಮದಲ್ಲಿ ಕಾರ್ ಜನರಲ್ ಮೊನ್ಸಿಂಜೊರ್ ಡೆನಿಸ್ ಮೊರಾಸ್ ಪ್ರಭು ಆಶ್ರಮದ ನಿವಾಸಿಗಳಿಗೆ ಮತ್ತು ಆಹ್ವಾನಿತರಿಗಾಗಿ ಬಲಿಪೂಜೆ ಅರ್ಪಿಸುವರು.
ಸಂತ ಅಂತೋನಿ ನಿಧನರಾಗಿ ಎಂಟು ಶತಮಾನ ಕಳೆದಿದ್ದು, ಅವರ ನಾಲಗೆ ಹಾಗೂ ಸ್ವರ ಗಂಟಲು ಇಟೆಲಿಯ ಪಾದ್ವ ನಗರದಲ್ಲಿರಿಸಲಾಗಿದೆ. ಆ ಸ್ಮರಣಿಕೆಗಳ ಗೌರಾವಾರ್ಥ ಈ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ಫಾ.ಒನಿಲ್ ಡಿಸೋಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.