ಆಳ್ವಾಸ್: ಎನ್ ಎಸ್ ಎಸ್ ವಾರ್ಷಿಕ ಶಿಬಿರ ಉದ್ಘಾಟನೆ

Update: 2018-02-14 15:11 GMT

ಮೂಡುಬಿದಿರೆ, ಫೆ. 14: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಮಿಜಾರು ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ  ಯೋಜನೆ ಇವರ ಸಹಭಾಗಿತ್ವದಲ್ಲಿ ಎನ್ ಎಸ್ ಎಸ್ ವಾರ್ಷಿಕ  ವಿಶೇಷ ಶಿಬಿರದ ಉದ್ಘಾಟನೆಯು ಮಿಜಾರಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ  ಆವರಣ ದಲ್ಲಿ ಜರುಗಿತು.

ಶಿಬಿರದ ಉದ್ಘಾಟಕರಾಗಿದ್ದ ಮಿಜಾರು ಗ್ರಾಮ ಪಂಚಾಯತ್ ಸದಸ್ಯರಾದ ಕರುಣಾಕರ ಶೆಟ್ಟಿ  ಮಾತನಾಡಿ  ಎನ್ ಎಸ್ ಎಸ್ ಕಾರ್ಯಕ್ರಮಗಳು  ವಿದ್ಯಾರ್ಥಿಗಳಲ್ಲಿ ನಾಯಕತ್ವಗುಣವನ್ನು ಬೆಳೆಸುತ್ತದೆ ಎಂದರು.  

ಹರಿಪ್ರಸಾದ್ ಶೆಟ್ಟಿ , ರಾಘವೇಂದ್ರ ಪೆಜತ್ತಾಯ, ಡಾ . ಹರೀಶಾನಂದ , ಡಾ . ದತ್ತಾತ್ರೇಯ , ಪ್ರೊ ಅಜಿತ್ ಹೆಬ್ಬಾರ್  ಮತ್ತಿತರರು ಉಪಸ್ಥಿತರಿದ್ದರು . ಆಶ್ರಿತಾ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

ಪ್ರೊ ರೋಶನ್ ಶೆಟ್ಟಿ ನೇತೃತ್ವದ ಈ ಶಿಬಿರದಲ್ಲಿ  ರಸ್ತೆ ದುರಸ್ತಿ , ದೇವಸ್ಥಾನದ ಆವರಣ ಶುಚಿತ್ವ ,  ವ್ಯಕ್ತಿತ್ವ ವಿಕಸನ ತರಬೇತಿ ,  ವಿಚಾರ ಸಂಕಿರಣ ,  ಪಕ್ಷಿ ವೀಕ್ಷಣೆ ಮತ್ತು ಮಾಹಿತಿ ಸಂಗ್ರಹ ಮುಂತಾದ ಚಟುವಟಿಕೆಗಳು ನಡೆಯಲಿವೆ . 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News