ಗ್ರಾಮಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಪುದುಚೇರಿ ಸರಕಾರ ಉತ್ತೇಜನ

Update: 2018-02-14 15:21 GMT

 ಪುದುಚೇರಿ, ಫೆ. 14: ಅಮೆರಿಕದ ಶಿಕ್ಷಣ ತಜ್ಞರ ನೆರವಿನಿಂದ ಗ್ರಾಮೀಣ ಪ್ರದೇಶದಲ್ಲಿ ಇಂಗ್ಲಿಷ್ ಮಾದ್ಯಮ ಶಿಕ್ಷಣ ಉತ್ತೇಜಿಸಲು ಪ್ರಸ್ತಾಪಿಸಲಾಗುವುದು ಎಂದು ಬುಧವಾರ ಪುದುಚೇರಿ ಸರಕಾರ ಹೇಳಿದೆ.

ಅಮೆರಿಕದ ರಾಯಭಾರಿ ಕೆನ್ನೆತ್ ಜಸ್ಟರ್‌ನೊಂದಿಗೆ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಪುದುಚೇರಿಯಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರೋತ್ಸಾಹಿಸಲು ಕೇಂದ್ರಾಡಳಿತ ಆಸಕ್ತಿ ಹೊಂದಿದೆ ಎಂದು ತಾನು ಅಮೆರಿಕದ ರಾಯಬಾರಿಗೆ ತಿಳಿಸಿದ್ದೇನೆ’’ ಎಂದು ಅವರು ಹೇಳಿದರು.

 ಈ ಯೋಜನೆ ಆರಂಭಿಸಲು ಅಮೆರಿಕದ ಶಿಕ್ಷಣ ತಜ್ಞರ ನೆರವು ಪಡೆಯಲು ಚೆನ್ನೈಯಲ್ಲಿರುವ ಅಮೆರಿಕದ ರಾಜತಾಂತ್ರಿಕ ಕಚೇರಿಯಲ್ಲಿ ಶೀಘ್ರದಲ್ಲಿ ಕೇಂದ್ರಾಡಳಿತ ಮುಕ್ತ ಮಾತುಕತೆ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.

 ಅಮೆರಿಕದ ಸಹಯೋಗದಲ್ಲಿ ಪುದುಚೇರಿಯಲ್ಲಿ ಆರೋಗ್ಯ ಹಾಗೂ ಇತರ ವಲಯಗಳಲ್ಲಿ ವಿವಿಧ ಯೋಜನೆಗಳನ್ನು ಆರಂಭಿಸಲು ಕೂಡ ಅಮೆರಿಕದ ರಾಯಭಾರಿಯೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ವಿ. ನಾರಾಯಣ ಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News