ಮಾಲ್ದೀವ್ಸ್ ಬಿಕ್ಕಟ್ಟು: ಸಂಸತ್‌ನಿಂದ ಸಂಸದರನ್ನು ಹೊರಗೆಸೆದ ಸೇನೆ

Update: 2018-02-14 16:41 GMT

ಮಾಲೆ, ಫೆ.14: ಮಾಲ್ದೀವ್ಸ್ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದ್ದು ಬುಧವಾರದಂದು ಸೇನೆಯು ಸಂಸತ್ ಸದಸ್ಯರನ್ನು ಸಂಸತ್ ಭವನದಿಂದ ಹೊರಗೆಸೆದಿರುವುದಾಗಿ ಮಾಲ್ದೀವ್ಸ್ ಪ್ರಜಾಸತಾತ್ಮಕ ಪಕ್ಷ (ಎಂಡಿಪಿ) ಟ್ವೀಟ್ ಮಾಡಿದೆ.

ಭದ್ರತಾ ಪಡೆಗಳು ನಿಜವಾಗಿಯೂ ಸಂಸದರನ್ನು ಮಜ್ಲೀಸ್ ಕಟ್ಟಡದಿಂದ ಹೊರಗೆಸೆಯುತ್ತಿದೆ. ತನ್ನನ್ನು ಒತ್ತಾಯಪೂರ್ವಕವಾಗಿ ಕೋಣೆಯಿಂದ ಹೊರಗೆಳೆದು ತರಲಾಗಿತ್ತು ಎಂಬ ಮುಖ್ಯ ನ್ಯಾಯಾಧೀಶರಾದ ಅಬ್ದುಲ್ಲಾ ಸಯೀದ್ ಅವರ ಹೇಳಿಕೆಯು ಸತ್ಯವಾಗಿತ್ತು ಎಂದು ಎಂಡಿಪಿಯ ಪ್ರಧಾನ ಕಾರ್ಯದರ್ಶಿ ಅನಸ್ ಅಬ್ದುಲ್ ಸತ್ತರ್ ಟ್ವೀಟ್ ಮಾಡಿದ್ದಾರೆ.

ದ್ವೀಪರಾಷ್ಟ್ರದಲ್ಲಿ ತುರ್ತುಸ್ಥಿತಿಯನ್ನು ಘೋಷಿಸಿರುವ ಹಿನ್ನೆಲೆಯಲ್ಲಿ ಮಾತುಕತೆಗೆ ಆಗಮಿಸಿದ್ದ ಯೂರೋಪ್ ಒಕ್ಕೂಟ, ಜರ್ಮನಿ ಮತ್ತು ಬ್ರಿಟನ್‌ನ ಪ್ರತಿನಿಧಿಗಳನ್ನು ಭೇಟಿಯಾಗಲು ಮಾಲ್ದೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ನಿರಾಕರಿಸಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯ ಆಯಕ್ತರಾದ ಝೇದ್ ರಾದ್ ಅಲ್ ಹುಸೈನ್ ಅವರು ಮಾಲ್ದೀವ್ಸ್‌ನಲ್ಲಿ ಹೇರಲಾಗಿರುವ ತುರ್ತುಸ್ಥಿತಿ ಪ್ರಜಾಪ್ರಭುತ್ವದ ಮೇಲಿನ ನೇರ ಹಲ್ಲೆ ಎಂದು ವಿವರಿಸಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಕೂಡಾ ತುರ್ತುಸ್ಥಿತಿಯನ್ನು ಹಿಂಪಡೆಯುವಂತೆ ಮಾಲ್ದೀವ್ಸ್ ಸರಕಾರಕ್ಕೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News