ಬ್ಯಾಂಕ್ ನಿಂದ ಕರೆ ಎಂದು ಮೋಸ: ಲಕ್ಷಾಂತರ ರೂ. ವಂಚನೆ
Update: 2018-02-14 22:29 IST
ಉಡುಪಿ, ಫೆ.14: ಬ್ಯಾಂಕಿನಿಂದ ಕರೆ ಮಾಡುವುದಾಗಿ ಹೇಳಿ ಎಟಿಎಂ ಪಿನ್ ನಂಬರ್ ಪಡೆದು ಖಾತೆಯಿಂದ ಲಕ್ಷಾಂತರ ರೂ. ಹಣ ಡ್ರಾ ಮಾಡಿ ವಂಚಿಸಿ ರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊರಂಗ್ರಪಾಡಿಯ ಸಂತೋಷ್ ಕೆ.ಎಸ್.(34) ಎಂಬವರು ಕೆನರಾ ಬ್ಯಾಂಕಿನ ಉಡುಪಿ ನಗರ ಶಾಖೆಯಲ್ಲಿ ಎಸ್‌ಬಿ ಖಾತೆ ಹೊಂದಿದ್ದು, ನ.27 ರಂದು ಬ್ಯಾಂಕಿನ ಮುಖ್ಯ ಕಚೇರಿಯಿಂದ ಕರೆ ಮಾಡುವುದಾಗಿ ಹಿಂದಿ ಭಾಷೆ ಯಲ್ಲಿ ಹೇಳಿ ಎಟಿಎಂ ಕಾರ್ಡ್‌ನ ನಂಬ್ರ ಹಾಗೂ ಒಟಿಪಿ ನಂಬರ್ ಪಡೆದು ನ.28ರವರೆಗೆ ಒಟ್ಟು 21 ಬಾರಿ ಖಾತೆಯಿಂದ ಒಟ್ಟು 1,58,480ರೂ. ಹಣ ಡ್ರಾ ಮಾಡಿ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.