ಎಟಿಎಂ ಮೆಶಿನ್ ಕಳವಿಗೆ ಯತ್ನ
Update: 2018-02-14 22:30 IST
ಮಣಿಪಾಲ, ಫೆ.14: ಅಲೆವೂರು ಪೆಟ್ರೋಲ್ ಬಂಕ್ ಬಳಿಯ ಕಾರ್ಪೋರೇಷನ್ ಬ್ಯಾಂಕಿಗೆ ಸಂಬಂಧಿಸಿದ ಎಟಿಎಂ ಮೇಷಿನ್‌ನ್ನು ಕಳವಿಗೆ ಯತ್ನಿಸಿರುವ ಬಗ್ಗೆ ವರದಿಯಾಗಿದೆ.
ಫೆ.13ರಂದು ಬೆಳಗಿನ ಜಾವ ಸುಮಾರು 20-25 ವರ್ಷದ ಪ್ರಾಯದ ಅಪರಿಚಿತ ವ್ಯಕ್ತಿ ಎಟಿಎಂ ಮೆಶಿನ್‌ನ್ನು ಆಯುಧದಿಂದ ಒಡೆದು ಕಳವಿಗೆ ಪ್ರಯತ್ನಿಸಿರುವು ದಾಗಿ ಬ್ಯಾಂಕಿನ ಮೆನೇಜರ್ ವೇಣುಗೋಪಾಲ ರಾವ್ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.