ಭದ್ರತಾ ಸಮಿತಿ ನಿರ್ಣಯವನ್ನು ಪಾಕ್ ಪಾಲಿಸುತ್ತಿಲ್ಲ: ಅಮೆರಿಕ

Update: 2018-02-14 17:04 GMT

ವಾಶಿಂಗ್ಟನ್, ಫೆ. 14: ಭಯೋತ್ಪಾದಕರ ವಿರುದ್ಧ ದಿಗ್ಬಂಧನಗಳನ್ನು ವಿಧಿಸಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಪಾಕಿಸ್ತಾನ ಪಾಲಿಸುತ್ತಿಲ್ಲ ಎಂದು ಅಮೆರಿಕ ಆರೋಪಿಸಿದೆ.

ಪ್ಯಾರಿಸ್‌ನಲ್ಲಿ ಫೆಬ್ರವರಿ 18ರಿಂದ 23ರವರೆಗೆ ನಡೆಯಲಿರುವ ಮಹತ್ವದ ಆರ್ಥಿಕ ಕ್ರಮ ಕಾರ್ಯ ಪಡೆ (ಎಫ್‌ಎಟಿಎಫ್) ಸಮಾವೇಶಕ್ಕೆ ಮುನ್ನ ಅಮೆರಿಕದ ವಿದೇಶಾಂಗ ಇಲಾಖೆ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.

‘‘ವಿಶ್ವಸಂಸ್ಥೆಯ ಕಪ್ಪುಹಣ ಬಿಳುಪು ತಡೆ ಹಾಗೂ ಭಯೋತ್ಪಾದನೆ ನಿಗ್ರಹ ಆರ್ಥಿಕತೆ ನಿರ್ಣಯಗಳನ್ನು ಪಾಕಿಸ್ತಾನ ಪಾಲಿಸದಿರುವ ಬಗೆಗಿನ ತನ್ನ ಕಳವಳಗಳನ್ನು ಅಮೆರಿಕ ನಿಯಮಿತವಾಗಿ ವ್ಯಕ್ತಪಡಿಸುತ್ತಾ ಬಂದಿದೆ’’ ಎಂದು ವಿದೇಶಾಂಗ ಇಲಾಖೆಯ ವಕ್ತಾರರೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News