ಫೆ.16ರಿಂದ ಪರಣೆಯಲ್ಲಿ ಧಾರ್ಮಿಕ ಮತ ಪ್ರವಚನ

Update: 2018-02-14 18:02 GMT

ಪುತ್ತೂರು, ಫೆ. 14: ಸವಣೂರು ಪರಣೆ ಮಿಹ್‌ರಾಜ್ ಜುಮಾ ಮಸೀದಿ ಸಮಿತಿ ಆಶ್ರಯದಲ್ಲಿ ನೂತನ ರಸ್ತೆ ನಿರ್ಮಾಣದ ಅಂಗವಾಗಿ ಫೆ. 16, 17 ಮತ್ತು 18ರಂದು ಪರಣೆ ಮಸೀದಿ ವಠಾರದಲ್ಲಿ ಮೂರು ದಿನಗಳ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ಸಮಿತಿಯ ಗೌರವಾಧ್ಯಕ್ಷ ಎನ್.ಪಿ.ಎಂ ಝೈನುಲ್ ಅಬೀದಿನ್ ತಂಙಳ್ ನೇತೃತ್ವದಲ್ಲಿ ನಡೆಯಲಿದೆ ಎಂದು ಪರಣೆ ಮಿಹ್‌ರಾಜ್ ಜುಮಾ ಮಸೀದಿಯ ಅಧ್ಯಕ್ಷ ಎಚ್.ಎಂ. ಹಸೈನಾರ್ ಹಾಜಿ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 16ರಂದು ಅಪರಾಹ್ನ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಅಂದು ರಾತ್ರಿ ಪಾಣೆಮಂಗಳೂರು ಗೂಡಿನಬಳಿ ಜುಮಾ ಮಸೀದಿಯ ಖತೀಬ್ ಅಬೂಬಕ್ಕರ್ ರಿಯಾರ್ ರಹಮಾನಿ ಕಿನ್ಯ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಫೆ.17ರಂದು ಕುಂಬ್ರ ಕೆಐಸಿ ಅಧ್ಯಕ್ಷ ಕೆ.ಪಿ ಅಹಮ್ಮದ್ ಹಾಜಿ ಅಧ್ಯಕ್ಷತೆಯಲ್ಲಿ ನಡೆಯುವ ಮತ ಪ್ರವಚನ ಕಾರ್ಯಕ್ರಮದಲ್ಲಿ ತಿರುವನಂತಪುರಂನ ಧಾರ್ಮಿಕ ವಿದ್ವಾಂಸ ರಿಯಾರ್ ಮನ್ನಾಣಿ ಮುಖ್ಯ ಪ್ರಭಾಷಣ ನೀಡಲಿದ್ದಾರೆ.

ಫೆ. 18ರಂದು ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾ ಅಧ್ಯಕ್ಷ ಇಬ್ರಾಹಿಂ ಹಾಜಿ ಕಮ್ಮಾಡಿ ವಹಿಸಲಿದ್ದು, ಕೇರಳ ಕುಮ್ಮನಂನ ನಿಝಾಮುದ್ದೀನ್ ಅರ್ಹರಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಇಬ್ರಾಹಿಂ ಹಾಜಿ ಕಮ್ಮಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷ ಕೆಂಪಿ ಮುಸ್ತಫಾ ಹಾಜಿ ಶುಭಾಶಂಸನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪರಣೆ ಎಸ್‌ಕೆಎಸ್‌ಎಸ್‌ಎಫ್‌ನ ಅಧ್ಯಕ್ಷ ಜಮಾಲುದ್ದೀನ್ ಅರ್ಹರಿ , ಪರಣೆ ಎಂಜೆಎಂ ಕಾರ್ಯಾಧ್ಯಕ್ಷ ಬಿ.ಕೆ. ಇಬ್ರಾಹಿಂ ಕುಂಬಮೂಲೆ, ಪದಾಧಿಕಾರಿಗಳಾದ, ಶರೀಫ್ ಕೆ, ಹಮೀದ್ ಅಮೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News