ಉಡುಪಿ ಎಸ್‌ಡಿಎಂ ಆಯುರ್ವೇದ ಕಾಲೇಜಿಗೆ 10 ರ್ಯಾಂಕ್
ಉಡುಪಿ, ಫೆ.16: ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ 2017-18ರ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಸ್ನಾತಕೋತ್ತರ ವಿಭಾಗದ ಪರೀಕ್ಷೆಯಲ್ಲಿ ಉಡುಪಿ ಎಸ್‌ಡಿಎಂ ಆಯುರ್ವೇದ ಕಾೇಜು 10 ರ್ಯಾಂಕ್‌ಗಳನ್ನು ಪಡೆದಿದೆ.
ಸ್ವಸ್ಥ ವೃತ್ತ ವಿಭಾಗದಲ್ಲಿ ಡಾ.ನಾಗರಾಜ್ ಗಣಪತಿ ಭಟ್ ಪ್ರಥಮ ರ್ಯಾಂಕ್, ಡಾ.ಟಾಕೂರ್ ಕ್ರುನಾಲ್‌ಸಿನ್ಹ ದಹ್ಯಬಾ ಮೂರನೇ ರ್ಯಾಂಕ್, ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಡಾ.ಮೃದುಲ ಕೆ.ಎಸ್. ಮೂರನೆ ರ್ಯಾಂಕ್, ಕಾಯಚಿಕಿತ್ಸಾ ವಿಭಾಗದಲ್ಲಿ ಡಾ.ಲೀನು ಸಿ.ಬಿ. ಮೂರನೇ ರ್ಯಾಂಕ್, ಡಾ.ಅಮಿತ್ ರಾಥಿ ಓಂಪಾಲ್ 7ನೇ ರ್ಯಾಂಕ್, ಮಾನಸರೋಗ ವಿಭಾಗದಲ್ಲಿ ಡಾ.ರಶ್ಮಿ ಕಲ್ಕೂರ ನಾಲ್ಕನೇ ರ್ಯಾಂಕ್, ಡಾ.ಪ್ರದೀಪ ಕುಮಾರ್ 7ನೇ ರ್ಯಾಂಕ್, ರಸಶಾಸ್ತ್ರ ಮತ್ತು ಬೈಷಜ್ಯಕಲ್ಪನ ವಿಭಾಗದಲ್ಲಿ ಡಾ. ಶಿವ್ ಓಂ ದೀಕ್ಷಿತ್ ಐದನೇ ರ್ಯಾಂಕ್, ರಚನ ಶರೀರ ವಿಭಾಗದಲ್ಲಿ ಡಾ.ಪ್ರಿಯಾಂಕ ಪ್ರಕಾಶ್ ಶಹಪುರ್ 6ನೇ ರ್ಯಾಂಕ್, ರೋಗನಿದಾನ ವಿಭಾಗದಲ್ಲಿ ಡಾ.ರಶ್ಮಿ ಪೂಜಾರ್ 8ನೇ ರ್ಯಾಂಕ್ ಗಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.