ಇಥಿಯೋಪಿಯ ಪ್ರಧಾನಿ ಹಠಾತ್ ರಾಜೀನಾಮೆ

Update: 2018-02-16 16:51 GMT

ಅಡಿಸ್ ಅಬಾಬ (ಇಥಿಯೋಪಿಯ), ಫೆ. 16: ಸುದೀರ್ಘ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಥಿಯೋಪಿಯದ ಪ್ರಧಾನಿ ಹೇಲ್‌ಮರಿಯಮ್ ಡೆಸಲೇನ್ ಗುರುವಾರ ರಾಜೀನಾಮೆ ನೀಡಿದ್ದಾರೆ.

ಅವರು 2012ರಿಂದ ಅಧಿಕಾರದಲ್ಲಿದ್ದಾರೆ.                      

ಹಲವು ತಿಂಗಳುಗಳಿಂದ ನಡೆಯುತ್ತಿರುವ ಸರಕಾರ ವಿರೋಧಿ ಪ್ರತಿಭಟನೆಗಳು ಹಾಗೂ ಆಡಳಿತಾರೂಢ ಮೈತ್ರಿಕೂಟದಲ್ಲೇ ಹೆಚ್ಚಿದ ಬಿರುಕಿನ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಧಾನಿ ತೆಗೆದುಕೊಂಡರು ಎಂದು ಹೇಳಲಾಗಿದೆ.

ಇಥಿಯೋಪಿಯದ ಸಮಸ್ಯೆಗಳನ್ನು ಪರಿಹರಿಸಲು ತಾನು ಕಷ್ಟಪಟ್ಟಿದ್ದೇನೆ ಎಂದು ಡೆಸಲೇನ್ ಹೇಳಿದರು. ಆದರೆ, ತನ್ನ ರಾಜೀನಾಮೆ ಕೂಡ ಪರಿಹಾರದ ಭಾಗವಾಗಿದೆ ಎಂದು ತಾನು ನಂಬಿದ್ದೇನೆ ಎಂಬುದಾಗಿಯೂ ಅವರು ನುಡಿದರು.

ಅಚ್ಚರಿಯ ರಾಜೀನಾಮೆ ಘೋಷಣೆ ಬಳಿಕ ರಾಜಧಾನಿ ಅಡಿಸ್ ಅಬಾಬದ ರಸ್ತೆಗಳು ಶಾಂತವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News