ಕಳೆದ ಬಾರಿಯ ಅಲ್ಪಸಂಖ್ಯಾತರ ಅನುದಾನ ಬಳಕೆಯಾಗಿಲ್ಲ: ಎಸ್‌ಡಿಪಿಐ
Update: 2018-02-16 23:36 IST
ಮಂಗಳೂರು, ಫೆ. 16: ಮುಖ್ಯಮಂತ್ರಿಯ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿರುವ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನವನ್ನು ಮೀಸಲಿಟ್ಟಿರುವುದನ್ನು ಸ್ವಾಗತಿಸಿರುವ ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅತಾವುಲ್ಲಾ ಜೋಕಟ್ಟೆ ಅವರು, ಆದರೆ, ಕಳೆದ ಬಾರಿಯ ಬಜೆಟ್‌ನಲ್ಲಿ ಸರಕಾರ ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ಎಷ್ಟು ಬಳಕೆಯಾಗಿದೆ ಎಂಬುದನ್ನು ಸರಕಾರ ಗಮನಿಸಬೇಕು ಎಂದು ಹೇಳಿದ್ದಾರೆ.
ಕಳೆದ ಸಾಲಿನ ಬಜೆಟ್‌ನಲ್ಲಿ ಸರಕಾರ ಅಲ್ಪಸಂಖ್ಯಾತರಿಗಾಗಿ ಮೀಸಲಿಟ್ಟಿದ್ದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಸರಕಾರ ವಿಫಲವಾಗಿದೆ. ಆದ್ದರಿಂದ ಸರಕಾರ ಈ ಬಾರಿ ಅಲ್ಪಸಂಖ್ಯಾತರಿಗೆ ಅನುದಾನವನ್ನು ಹೆಚ್ಚಿಸಿದ್ದದರೂ ಅದರ ಸಂಪೂರ್ಣ ಬಳಕೆಯಾಗಲಿ. ಸರಕಾರ ಅಲ್ಪಸಂಖ್ಯಾತರಿಗೆ ಕೇವಲ ವಾಗ್ದಾನ ನೀಡಿ ವಂಚನೆ ಮಾಡದಿರಲಿ ಎಂದು ಅತಾವುಲ್ಲಾ ಜೋಕಟ್ಟೆ ಪ್ರತಿಕ್ರಿಯೆ ನೀಡಿದ್ದಾರೆ.