×
Ad

ತೊಕ್ಕೊಟ್ಟು: ಫೆ. 18ರಂದು ‘ಸುರಕ್ಷಾ ಪಾಲಿಕ್ಲಿನಿಕ್’ ಉದ್ಘಾಟನೆ

Update: 2018-02-16 23:38 IST

ಮಂಗಳೂರು, ಫೆ. 16: ತೊಕ್ಕೊಟ್ಟು ಬಸ್ಸು ನಿಲ್ದಾಣದ ಸಮೀಪದ ಸ್ಕೈ ಟವರ್‌ನಲ್ಲಿ ನೂತನ ‘ಸುರಕ್ಷಾ ಪಾಲಿಕ್ಲಿನಿಕ್’ ಫೆ. 18ರಂದು ಬೆಳಗ್ಗೆ 10:30ಕ್ಕೆ ಶುಭಾರಂಭಗೊಳ್ಳಲಿದೆ.

ಸಚಿವ ಯು.ಟಿ.ಖಾದರ್ ಅವರು ಹೆಲ್ತ್ ಕಾಂಪ್ಲೆಕ್ಸ್, ನಿಟ್ಟೆ ವಿವಿಯ ಪ್ರೊ ಚಾನ್ಸಲರ್ ಡಾ.ಶಾಂತರಾಮ ಶೆಟ್ಟಿ ಅವರು ಪಾಲಿ ಕ್ಲಿನಿಕ್ ಹಾಗೂ ಮಂಗಳೂರು ಡಯಾಸೀಸ್‌ನ ವಿಕಾರ್ ಜನರಲ್ ಫಾ.ಡೆನಿಸ್ ಪ್ರಭು ಅವರು ಡಯಗ್ನಾಸ್ಟಿಕ್ ಸೆಂಟರ್‌ನ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಬಿಜೆಪಿಯ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಬೊಳಿಯಾರ್, ಭಾರತೀಯ ಮಾನವ ಹಕ್ಕು ಸಮಿತಿಯ ರಾಜ್ಯಾಧ್ಯಕ್ಷ ಜೊಜೊ ಕೆ. ಜೋಸೆಫ್, ಬಿಜೆಪಿ ದ.ಕ. ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ್, ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಹೈದರ್ ಪರ್ತಿಪಾಡಿ, ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ರಾಜ್ಯ ಆಹಾರ ಆಯೋಗದ ಸದಸ್ಯ ಬಿ.ಎ.ಮುಹಮ್ಮದ್ ಅಲಿ, ಉಳ್ಳಾಲ ಸೈಯದ್ ಮದನಿ ದರ್ಗಾ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಭಾಗವಹಿಸಲಿದ್ದಾರೆ.

ನೂತನ ‘ಸುರಕ್ಷಾ ಪಾಲಿಕ್ಲಿನಿಕ್’ನಲ್ಲಿ ಮೆಡಿಕಲ್ಸ್, ಕ್ಲಿನಿಕಲ್ ಲ್ಯಾಬ್, ಅಲ್ಟ್ರಾ ಸೌಂಡ್ ಇಕೊ ಆ್ಯಂಡ್ ಕಲರ್ ಡೊಪ್ಲರ್ ಸ್ಕಾನ್, ಎಕ್ಸ್‌ರೇ ಮತ್ತು ಇಸಿಜಿ ಸೌಲಭ್ಯಗಳು ಹೊಂದಿವೆ.

ಉದ್ಘಾಟನಾ ಕಾರ್ಯಕ್ರಮ ಪ್ರಯುಕ್ತ ಫೆ. 19ರಿಂದ 21ರವರೆಗೆ ಮಧುಮೇಹ ರೋಗಿಗಳ ಉಚಿತ ತಪಾಸಣೆ ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಮಾ. 17ರವರೆಗೆ ಶೇ. ಶೇ. 50ರ ರಿಯಾಯಿತಿ ದರದಲ್ಲಿ ಲಿಪಿಡ್ ಪ್ರೊಫೈಲ್ (ಎಲ್‌ಪಿ), ಲಿವರ್ ಫಂಕ್ಷನ್ ಟೆಸ್ಟ್ (ಎಲ್‌ಎಫ್‌ಟಿ), ಕಂಪ್ಲೀಟ್ ಬ್ಲಡ್ ಕೌಂಟ್ (ಸಿಬಿಸಿ) ನಡೆಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News