ಫೆ.20ರಂದು ವಿಕಲಚೇತನರಿಂದ ಬೈಂದೂರುನಲ್ಲಿ ಧರಣಿ
Update: 2018-02-17 19:24 IST
ಉಡುಪಿ, ಫೆ.17: ವಿಕಲಚೇತನರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ಪಾಲಕರ ಒಕ್ಕೂಟದ ನೇತೃತ್ವದಲ್ಲಿ ಫೆ.20ರಂದು ಬೆಳಗ್ಗೆ 11ಗಂಟೆಗೆ ಬೈಂದೂರು ಶ್ರೀಮೂಕಾಂಬಿಕಾ ರೈಲ್ವೆ ನಿಲ್ದಾಣದ ಮುಂದೆ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ.
ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ನೇತೃತ್ವದಲ್ಲಿ ವಿಕಲಚೇತನರ ಸಮಸ್ಯೆಗಳ ನಿವಾರಣೆಗಾಗಿ ಒತ್ತಾಯಿಸಿ ಮಾ.6ರಂದು ದೆಹಲಿಯ ಸಂಸತ್ ಭವನದ ಮುಂದೆ ಧರಣಿ ಹೋರಾಟ ನಡೆಸಲಾಗುವುದು. ಅಂಗವಿಕಲರು ರೈಲುಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈಲ್ವೆ ಇಲಾಖೆ ಇನ್ನು ಕೂಡಾ ವಿಕಲಚೇತನರ ಸ್ನೇಹಿ ಆಗಿಲ್ಲ ಎಂದು ಒಕ್ಕೂಟದ ಉಡುಪಿ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ವೆಂಕಟೇಶ ಕೋಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.