ಅಂತ್ಯ ಸಂಸ್ಕಾರಕ್ಕೆ ಹಣವಿಲ್ಲ: ಪುತ್ರನ ಮೃತದೇಹವನ್ನು ದಾನ ಮಾಡಿದ ತಾಯಿ

Update: 2018-02-17 16:07 GMT
ಸಾಂದರ್ಭಿಕ ಚಿತ್ರ

ಬಸ್ತಾರ್, ಫೆ. 17: ಚತ್ತೀಸ್‌ಗ ಬಸ್ತಾರ್‌ನ ಮಹಿಳೆಯೋರ್ವರು ಮೃತಪಟ್ಟ ಪುತ್ರನ ಅಂತ್ಯ ಸಂಸ್ಕಾರ ನಡೆಸಲು ಹಣವಿಲ್ಲದೆ ಮೃತದೇಹವನ್ನು ಜಗ್ದಾಲ್ಪುರ ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದಾರೆ. ನಮ್ಮ ಕುಟುಂಬಕ್ಕೆ ನೆರವು ನೀಡಲು ಯಾರೊಬ್ಬರೂ ಮುಂದೆ ಬರಲಿಲ್ಲ ಎಂದು ಮಹಿಳೆಯ ನಾದಿನಿ ತಿಳಿಸಿದ್ದಾರೆ. ‘‘ನಾವು ಕಡು ಬಡವರು. ಮೃತದೇಹವನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗುವಷ್ಟು ಹಣ ನಮ್ಮಲ್ಲಿ ಇಲ್ಲ. ಆಸ್ಪತ್ರೆಯಲ್ಲಿ ವ್ಯಕ್ತಿಯೋರ್ವರು ಮೃತದೇಹವನ್ನು ದಾನ ಮಾಡುವಂತೆ ಸಲಹೆ ನೀಡಿದರು’’ ಎಂದು ಅವರು ಹೇಳಿದ್ದಾರೆ. ಈ ಕುಟುಂಬ ತುಂಬಾ ಬಡತನದಲ್ಲಿದೆ. ಆದುದರಿಂದ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡುವಂತೆ ನಾನು ಸಲಹೆ ನೀಡಿದೆ ಎಂದು ವೈದ್ಯಕೀಯ ಕಾಲೇಜಿನ ಶವಾಗಾರದ ಉಸ್ತುವಾರಿ ಮಂಗಲ್ ಸಿಂಗ್ ತಿಳಿಸಿದ್ದಾರೆ. ಫೆಬ್ರವರಿ 12ರಂದು ಮಹಿಳೆಯ ಪುತ್ರ ಬಾಮನ್ ಅಪರಿಚಿತ ವಾಹನ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ. ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಪೆಬ್ರವರಿ 15ರಂದು ಆತ ಮೃತಪಟ್ಟಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News