ರಂಗಹಬ್ಬ ಸಮಾರೋಪ: ಮುದ್ರಾಡಿಗೆ ‘ಯಕ್ಷಸುಮ’ ಪ್ರಶಸಿ ಪ್ರದಾನ

Update: 2018-02-17 16:22 GMT

ಉಡುಪಿ, ಫೆ.17: ಕಲಾ ಪ್ರವೃತ್ತಿಯಿಂದ ದೊರೆಯುವ ಆನಂದ ಬೇರೆ ಪ್ರವೃತ್ತಿ ಯಲ್ಲಿ ಸಿಗುವುದಿಲ್ಲ. ಅದು ನೋವನ್ನು ಮೀರಿದ ಆನಂದ ಎಂದು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಹೇಳಿದ್ದಾರೆ.

ಸುಮನಸಾ ಕೊಡವೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಪೇಜಾವರ ಮಠದ ಸಹಯೋಗದೊಂದಿಗೆ ಅಜ್ಜರಕಾಡು ಭುಜಂಗ ಪಾರ್ಕ್‌ನ ಬಯಲುರಂಗ ಮಂದಿರದಲ್ಲಿ ಶನಿವಾರ ನಡೆದ ರಂಗಹಬ್ಬ ಸಮಾ ರೋಪ ಸಮಾರಂಭದಲ್ಲಿ ಯಕ್ಷಗುರು ದಿವಂಗತ ಯು.ದುಗ್ಗಪ್ಪ ಸ್ಮರಣಾರ್ಥ ನೀಡಿದ ‘ಯಕ್ಷಸುಮ’ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.

ಹಿರಿಯ ರಂಗಕರ್ಮಿ ಗುರುರಾಜ್ ಮಾರ್ಪಳ್ಳಿ ಸಮಾರೋಪ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ನಿ.ಬಿ. ವಿಜಯ ಬಲ್ಲಾಳ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಅಚ್ಯುತ ಅಮೀನ್ ಕಲ್ಮಾಡಿ, ಮಾಜಿ ಶಾಸಕ ಕೆ.ರಘುಪತಿ ಭಟ್, ಭಾಸ್ಕರ್ ಪಾಲನ್ ಉಪಸ್ಥಿತರಿದ್ದರು.

ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿದರು. ಗೌರವ ಸಲಹೆ ಗಾರ ಭಾಸ್ಕರ್ ಭಟ್ ಅಗ್ರಹಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ದಯಾ ನಂದ ಯು. ವಂದಿಸಿದರು. ಎಂ.ಎಸ್.ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News