ಫೆ.18ರಿಂದ ಕುಡುಪು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

Update: 2018-02-17 16:31 GMT

ಮಂಗಳೂರು, ಫೆ. 17: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನ ಕ್ಷೇತ್ರ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಫೆ.18ರಿಂದ 25ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ.

ಬ್ರಹ್ಮಕಲಶೋತ್ಸವದ ಸಿದ್ಧತಾ ಕಾರ್ಯಗಳಲ್ಲಿ ನೂರಾರು ಕಾರ್ಯಕರ್ತರು ಭಾಗವಸುತ್ತಿದ್ದು, ದೇವಸ್ಥಾನದ ಸುಂದರೀಕರಣ ಬಹುತೇಕ ಪೂರ್ಣಗೊಂಡಿದೆ. ಸೇವಾ ಬದಲಾವಣೆಫೆ.21 ರಿಂದ ಫೆ.25ರ ರವರೆಗೆ ನಾಗತಂಬಿಲ, ಪಂಚಾಮೃತ, ಅಭಿಷೇಕ, ಪಂಚಕಜ್ಜಾಯ ಸೇವೆಗಳು ನಡೆಯುವುದಿಲ್ಲ.ನಾಗಬನದ ಉತ್ತರ ದಿಕ್ಕಿನಲ್ಲಿ ಹೊರೆಕಾಣಿಕೆ ಉಗ್ರಾಣದ ವ್ಯವಸ್ಥೆ ಮಾಡಲಾಗಿದ್ದು, ನಾಗಬನದ ಹಿಂಬದಿಯಲ್ಲಿ ವ್ಯವಸ್ಥಿತವಾದ ಸ್ಕಂದ ಶ್ರೀ ಭೋಜನ ಶಾಲೆ ವ್ಯವಸ್ಥೆ ಮಾಡಲಾಗಿದೆ.

ದೇವಸ್ಥಾನದ ಕೆರೆಯ ದಕ್ಷಿಣ ದಿಕ್ಕಿನಲ್ಲಿ ಶ್ರೀ ಪದ್ಮನಾಭ ಮುಖ್ಯ ವೇದಿಕೆಯನ್ನು ರಚಿಸಲಾಗಿದ್ದು, ಪ್ರತಿನಿತ್ಯ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ದೇವಸ್ಥಾನದ ಹೊರಭಾಗದ ವಾಯುವ್ಯ ಮೂಲೆಯಲ್ಲಿ ಅನಂತ ಶ್ರೀ ವೇದಿಕೆಯನ್ನು ರಚಿಸಲಾಗಿದ್ದು, ಪ್ರತಿನಿತ್ಯ ಶಾಸ್ತ್ರೀಯ ವಾದ್ಯ ಸಂಗೀತಗಳು ಮತ್ತು ಭಜನ ಕಾರ್ಯಕ್ರಮಗಳು ನಡೆಯಲಿವೆ.

ಪಾರ್ಕಿಂಗ್ ವ್ಯವಸ್ಥೆ

ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮಂಗಳೂರು ಕಡೆಯಿಂದ ಬರುವ ವಾಹನಗಳು ದೇವಸ್ಥಾನಕ್ಕಿಂತ ಮೊದಲೇ ಸಿಗುವ ಕುಡುಪು ಸೇತುವೆ ಬಳಿ ಎಡಗಡೆಯಲ್ಲಿರುವ ಭಟ್ರ ಕಲ್ಲುರ್ಟಿ ದೇವಸ್ಥಾನವಿರುವ ಬಯಲಿನಲ್ಲಿ ನಿಲ್ಲಿಸಬೇಕು. ಅದೇ ರೀತಿ ಮಂಗಳೂರಿನಿಂದ ಬರುವ ಬಸ್‌ಗಳು ಕುಡುಪು ಸೇತುವೆ ಬಳಿ ನಿಲ್ಲಿಸಿ ಭಕ್ತಾದಿಗಳನ್ನು ಇಳಿಸಿ ಹತ್ತಿಸಬೇಕು.

ಭಕ್ತಾದಿಗಳು ದೇವಸ್ಥಾನಕ್ಕೆ ಬರಲು ಗ್ಯಾರೇಜ್ ಎದುರಿನ ರಸ್ತೆಯನ್ನು ಉಪಯೋಗಿಸಿ ನಡೆದುಕೊಂಡು ದೇವಸ್ಥಾನ ತಲುಪಬಹುದು. ಮೂಡುಬಿದಿರೆ ವಾಮಂಜೂರು ಕಡೆಯಿಂದ ಬರುವ ವಾಹನಗಳನ್ನು ದೇವಸ್ಥಾನದ ಸಮೀಪದ ರಥಬೀದಿಯಲ್ಲಿ ಕೊನೆಯಲ್ಲಿ ಇರುವ ಗದ್ದೆಯಲ್ಲಿ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.

ಈ ರಸ್ತೆ ಮೂಲಕ ಬರುವ ಬಸ್‌ಗಳನ್ನು ಕುಡುಪು ಮಿತ್ರ ಮಂಡಳಿ ಬಳಿ ನಿಲುಗಡೆ ಮಾಡಬೇಕು. ವಿಶೇಷ ಪಾರ್ಕಿಂಗ್ ವ್ಯವಸ್ಥೆಗೆ ಕುಡುಪು ಸೇತುವೆ ಬಳಿ ಇರುವ ಬಸ್‌ನ ಗ್ಯಾರೇಜ್ ಬಳಿ ಜಾಗ ನಿಗದಿಪಡಿಸಲಾಗಿದೆ. ವ್ಯಾಪಾರ ಮಳಿಗೆಗಳು ಹಾಗೂ ಅಮ್ಯೂಸ್‌ಮೆಂಟ್ ಪಾರ್ಕ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಕುಡುಪು ಕಟ್ಟೆಯಿಂದ ಮಂಗಳ ಜ್ಯೋತಿವರೆಗೆ ರಸ್ತೆಯ ಇಕ್ಕಲೆಗಳಲ್ಲಿ ವಾಹನ ಪಾರ್ಕಿಂಗ್ ಮಾಡಲು ಅವಕಾಶ ಇಲ್ಲ.

ಶೌಚಾಲಯ, ನೀರಿನ ವ್ಯವಸ್ಥೆ

ಎಲ್ಲ ಪಾರ್ಕಿಂಗ್ ಜಾಗದಲ್ಲಿ ಶೌಚಾಲಯ ನೀರಿನ ವ್ಯವಸ್ಥೆ, ಕಸದ ತೊಟ್ಟಿಗಳ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನಹರಿಸು ವಂತೆ ಕೋರಲಾಗಿದೆ.ನಾಗಬನದ ಉತ್ತರ ದಿಕ್ಕಿನಲ್ಲಿ ಹೊರೆಕಾಣಿಕೆ ಉಗ್ರಾಣ ವ್ಯವಸ್ಥೆ ಮಾಡಲಾಗಿದ್ದು, ನಾಗಬನದ ಹಿಂಬದಿಯಲ್ಲಿ ಭೋಜನ ಶಾಲೆ ವ್ಯವಸ್ಥೆ ಮಾಡಲಾಗಿದೆ. ದೇವಳದ ಕೆರೆಯ ದಕ್ಷಿಣ ದಿಕ್ಕಿನಲ್ಲಿ ಶ್ರೀ ಪದ್ಮನಾಭ ಮುಖ್ಯ ವೇದಿಕೆಯನ್ನು ರಚಿಸಲಾಗಿದ್ದು, ಪ್ರತಿನಿತ್ಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ದೇವಸ್ಥಾನದ ವಾಯುವ್ಯ ಮೂಲೆಯಲ್ಲಿ ಅನಂತಶ್ರೀ ವೇದಿಕೆ ರಚಿಸಲಾಗಿದ್ದು, ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News