​ಉಡುಪಿ ಜಿಲ್ಲೆಯ ಪೊಲೀಸ್ ಉಪನಿರೀಕ್ಷಕರ ವರ್ಗಾವಣೆ

Update: 2018-02-17 17:05 GMT

ಉಡುಪಿ, ಫೆ.17: ಕರ್ನಾಟಕ ವಿಧಾನಸಭಾ ಚುನಾವಣೆ-2018ರ ನೀತಿ ಸಂಹಿತೆಗನುಗುಣವಾಗಿ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಉಪ ನಿರೀಕ್ಷಕ (ಎಸ್ಸೈ)ರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಗಂಗೊಳ್ಳಿ ಠಾಣೆಯ ವಿನಾಯಕ ಬಿಲ್ಲವರನ್ನು ಕಾರವಾರ ಸಂಚಾರ ಠಾಣೆಗೆ, ಕುಂದಾಪುರ ಸಂಚಾರ ಠಾಣೆಯ ಸುಬ್ಬ ಬಿ.ರನ್ನು ಮಂಕಿ ಠಾಣೆ(ಕಾಸು)ಗೆ, ಕುಂದಾಪುರ ಸಂಚಾರ ಠಾಣೆಯ ಜಯ ಕೆ.ರನ್ನು ಬೆಳ್ತಂಗಡಿ ಸಂಚಾರ ಠಾಣೆಗೆ, ಉಡುಪಿ ಸಂಚಾರ ಠಾಣೆಯ ಗೋಪಾಲಕೃಷ್ಣ ಅವರನ್ನು ಧರ್ಮಸ್ಥಳ ಠಾಣೆಗೆ, ಅಮಾಸೆಬೈಲು ಠಾಣೆಯ ಶೇಖರ ಅವರನ್ನು ಕುದುರೆಮುಖ ಠಾಣೆಗೆ, ಕೊಲ್ಲೂರು ಠಾಣೆಯ ಸುದರ್ಶನ್‌ರನ್ನು ಪುಂಜಾಲಕಟ್ಟೆ ಠಾಣೆಗೆ, ಉಡುಪಿ ನಗರ ಠಾಣೆ (ಅಪರಾಧ)ಯ ಅಣ್ಣಯ್ಯ ಗೊಲ್ಲ ಅವರನ್ನು ಸುಳ್ಯ ಠಾಣೆ (ಅಪರಾಧ)ಗೆ, ಶಂಕರನಾರಾಯಣ ಠಾಣೆಯ ಸುನಿಲ್‌ಕುಮಾರ್ ಎಂ.ಎಸ್. ಅವರನ್ನು ಉಡುಪಿ ನಗರ ಠಾಣೆಗೆ, ಬ್ರಹ್ಮಾವರ ಠಾಣೆಯ ಮಧು ಟಿ.ಎಸ್ ಅವರನ್ನು ಗಂಗೊಳ್ಳಿ ಠಾಣೆಗೆ, ಉಡುಪಿ ನಗರ ಠಾಣೆಯ ಅನಂತ ಪದ್ಮನಾಭ ಅವರನ್ನು ಚಿಕ್ಕಮಗಳೂರು ಅಜ್ಜಂಪುರ ಠಾಣೆಗೆ, ಉಡುಪಿ ಸಂಚಾರ ಠಾಣೆಯ ಶೇಖರರನ್ನು ಕಾಪು ಠಾಣೆ(ಅಪರಾಧ)ಗೆ, ಕಾಪು ಠಾಣೆ(ಅಪರಾಧ)ಯ ಲಕ್ಷ್ಮಣ ಅವರನ್ನು ಉಡುಪಿ ಸಂಚಾರ ಠಾಣೆಗೆ, ಕಾರ್ಕಳ ನಗರ ಠಾಣೆ(ಅಪರಾಧ)ಯ ಸಂಕಪ್ಪಯ್ಯ ಎ.ಕೆ. ಅವರನ್ನು ಕುಂದಾಪುರ ಠಾಣೆ(ಅಪರಾಧ)ಗೆ, ಕಾರ್ಕಳ ಗ್ರಾಮಾಂತರ ಠಾಣೆಯ ಪುರುಷೋತ್ತಮ ಅವರನ್ನು ಕುಂದಾಪುರ ಸಂಚಾರ ಠಾಣೆಗೆ, ಕುಂದಾಪುರ ಠಾಣೆ(ಅಪರಾಧ)ಯ ದೇವರಾಜ ಎಂ.ಎಚ್. ಅವರನ್ನು ಮಂಗಳೂರು ಗ್ರಾಮಾಂತರ ಠಾಣೆ(ಅಪರಾಧ) ಸಿಒಪಿ ಘಟಕಕ್ಕೆ, ಶಿರ್ವ ಠಾಣೆಯ ನರಸಿಂಹ ಶೆಟ್ಟಿ ಅವರನ್ನು ಕಾರ್ಕಳ ನಗರ ಠಾಣೆ(ಅಪರಾಧ)ಗೆ ವರ್ಗಾಯಿಸಲಾಗಿದೆ.

ಅದೇ ರೀತಿ ಸುಳ್ಯ ಠಾಣೆ(ಅಪರಾಧ)ಯ ಮಾಧವ.ಕೆ ಅವರನ್ನು ಉಡುಪಿ ನಗರ ಠಾಣೆ(ಅಪರಾಧ)ಗೆ, ಬೆಳ್ತಂಗಡಿ ಸಂಚಾರ ಠಾಣೆಯ ಲೋಲಾಕ್ಷ ಅವರನ್ನು ಕುಂದಾಪುರ ಸಂಚಾರ ಠಾಣೆಗೆ, ಪುಂಜಾಲಕಟ್ಟೆ ಠಾಣೆಯ ರಾಮ ನಾಯ್ಕರನ್ನು ಕೊಲ್ಲೂರು ಠಾಣೆಗೆ, ಧರ್ಮಸ್ಥಳ ಠಾಣೆಯ ಕೊರಗಪ್ಪ ನಾಯ್ಕರನ್ನು ಉಡುಪಿ ಸಂಚಾರ ಠಾಣೆಗೆ, ಪುತ್ತೂರು ಗ್ರಾಮಾಂತರ ಠಾಣೆಯ ಅಬ್ದುಲ್ ಖಾದರ್‌ರನ್ನು ಶಿರ್ವ ಠಾಣೆಗೆ, ಮೂಡಿಗೆರೆ ಠಾಣೆಯ ರಫೀಕ್ ಎಂ. ಅವರನ್ನು ಬ್ರಹ್ಮಾವರ ಠಾಣೆಗೆ, ಗೋಣಿಬೀಡು ಠಾಣೆಯ ರಾಘವೇಂದ್ರ ಸಿ. ಅವರನ್ನು ಶಂಕರನಾರಾಯಣ ಠಾಣೆಗೆ, ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಸುಗುಮಾರನ್‌ರನ್ನು ಅಮಾಸೆಬೈಲು ಠಾಣೆಗೆ, ಚಿಕ್ಕಮಗಳೂರು ನಗರ ಠಾಣೆಯ ನಾಸೀರ್ ಹುಸೇನ್‌ರನ್ನು ಕಾರ್ಕಳ ಗ್ರಾಮಾಂತರ ಠಾಣೆಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News