ನೇಣು ಬಿಗಿದು ಅಮ್ಟಾಡಿ ಗ್ರಾಮ ಪಂಚಾಯತ್ ಸದಸ್ಯೆ ಆತ್ಮಹತ್ಯೆ

Update: 2018-02-17 17:27 GMT

ಬಂಟ್ವಾಳ, ಫೆ. 17: ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ಸದಸ್ಯೆ ಸಿಪಿಐ ನಾಯಕಿ ಚಂದ್ರಾವತಿ ಬಿ. ಭಂಡಾರಿ (52) ಅವರು ಶನಿವಾರ ಅಜೆಕಲ ಎಂಬಲ್ಲಿರುವ ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಮಂಡಳಿ ಸದಸ್ಯೆ, ಎಐಟಿಯುಸಿನ ಜಿಲ್ಲಾ ಮಂಡಳಿ ಸದಸ್ಯೆ, ಭಾರತೀಯ ಮಹಿಳಾ ಒಕ್ಕೂಟ(ಎನ್‌ಎಫ್‌ಐಡಬ್ಲ್ಯೂ) ಜಿಲ್ಲಾ ಸಮಿತಿ ಸದಸ್ಯೆಯಾಗಿ ಕರ್ತವ್ಯ ನಿರ್ವಹಿಸಿದ್ದ ಅವರು, ಪತಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸಿಪಿಐ ಪಕ್ಷ ಬೆಂಬಲದಿಂದ ಅಮ್ಟಾಡಿ ಗ್ರಾಮ ಪಂಚಾಯತ್‌ನಲ್ಲಿ ಸ್ಪರ್ಧಿಸಿ ಸತತ ಐದು ಬಾರಿ ಅವರು ಗೆಲುವು ಸಾಧಿಸಿದ್ದರು. ಟೈಲರಿಂಗ್ ಶಿಕ್ಷಕಿಯಾಗಿ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದ ಅವರು, ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ಒಂದು ಬಾರಿ ಸಿಪಿಐನಿಂದ ತಾಲೂಕು ಪಂಚಾಯತ್ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು.

ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News