ಉತ್ತಮ ಸ್ವಚ್ಛತೆ ಪದ್ಧತಿ ಅಳವಡಿಕೆ : ಕಾಪುವಿಗೆ ದ್ವಿತೀಯ ಸ್ಥಾನ

Update: 2018-02-18 13:50 GMT

ಕಾಪು,ಫೆ.19 : ಕಾಪು ರಾಜ್ಯದಲ್ಲಿ ಘನತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಸಾಧನೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. 

ರಾಜ್ಯದ 276 ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‍ಗಳನ್ನು ಒಳಗೊಂಡು ನಡೆಸಲಾದ ಉತ್ತಮ ಸ್ವಚ್ಛತೆ ಪದ್ಧತಿ ಅಳವಡಿಕೆ ಸ್ಪರ್ಧೆಯಲ್ಲಿ ಕಾಪು ಉತ್ತಮ ಸಾಧನೆ ತೋರುವ ಮೂಲಕ ಪ್ರಶಂಸೆಗೆ ಪಾತ್ರವಾಗಿದೆ. ಪುರಸಭೆಯಾಗಿ ಮೇಲ್ದರ್ಜೆಗೇರಿದ ಮೂರೇ ವರ್ಷಗಳಲ್ಲಿ ಸಾಧನೆ ಮಾಡಿದೆ. ಸಿಟಿ ಮ್ಯಾನೇಜರ್ಸ್ ಅಸೋಸಿಯೇಶನ್ ಕರ್ನಾಟಕದ ನೇತೃತ್ವದಲ್ಲಿ ಈ ಪ್ರಶಸ್ತಿಯನ್ನು ಆಯ್ಕೆ ಪ್ರಕ್ರಿಯೆ ನಡೆದಿದ್ದು, ಘನತ್ಯಾಜ್ಯ ನಿರ್ವಹಣೆ ಬಗ್ಗೆ ತೋರಿದ ಶ್ಲಾಘನೀಯ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಶನಿವಾರ ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಜ್ಯದ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಅವರು ಕಾಪು ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ ಅವರಿಗೆ ರೂ. 75ಸಾವಿರ ನಗದು ಸಹಿತ ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News