ಕಾಪು : ಉಚಿತ ಕರಾಟೆ ತರಬೇತಿ ಶಿಬಿರ
Update: 2018-02-18 20:01 IST
ಕಾಪು, ಫೆ.18: ಜಪಾನ್ ಕರಾಟೆ ಡು ಕನ್ನಿಂಜುಕು ಆರ್ಗನೈಝೇಶನ್ ಕರ್ನಾಟಕ ಇದರ ವತಿಯಿಂದ ಇಂಟರ್ ಡೊಜೊ ಉಚಿತ ಕರಾಟೆ ತರಬೇತಿ ಶಿಬಿರವನ್ನು ಇತ್ತೀಚೆಗೆ ಕಾಪು ಕಾಂಚನ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಪಾಲ್ಗೊಂಡ 170ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ರಕ್ಷಿತ್ ಪೂಜಾರಿ, ಪ್ರದ್ಯುಮ್ ಕೋಟ್ಯಾನ್, ಮುಹಮ್ಮದ್ ಸಾಹಿಲ್, ಯಜ್ಞೇಶ್ ಹೆಗಡೆ, ಯಾಸೀನ್ ಉನೈಸ್ ತರಬೇತಿ ನೀಡಿದರು. ಮುಖ್ಯ ತರಬೇತುದಾರರಾಗಿ ಶಂಶುದ್ದೀನ್ ಎಚ್.ಶೇಕ್ ಕಾರ್ಯನಿರ್ವಹಿಸಿದರು.